ನಿಧನ

ಕುಣಿತ ಭಜನೆ ವೇಳೆ ರತ್ನಾವತಿ ಬಾಳಪ್ಪ ಪೂಜಾರಿ ಕುಸಿದು ಬಿದ್ದು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಈಶ್ವರಮಂಗಲ:ಕಾವು ಮುತ್ತು ಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದ ವೇಳೆ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ.ಸುಳ್ಯಪದವು ಮಹಾಲಕ್ಷ್ಮಿ ವನಿತಾ ಭಜನ ಮಂಡಳಿಯ ಸದಸ್ಯೆ ರತ್ನಾವತಿ ಬಾಳಪ್ಪ ಪೂಜಾರಿ ಕನ್ನಡ್ಕ (63) ಅವರು ಫೆಬ್ರವರಿ 28ರ ರಾತ್ರಿ ಕುಣಿತ ಭಜನೆ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ಹೃದಯಾಘಾತವೇ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ಅವರು ಇತ್ತೀಚೆಗೆ ಫೆಬ್ರವರಿ 27ರಂದು ಭಜನೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಆದರೆ ಫೆಬ್ರವರಿ 28ರಂದು ಎರಡು ಭಜನೆಗಳಲ್ಲಿ ಭಾಗವಹಿಸಿದ ನಂತರ ಮೂರನೇ ಭಜನೆ ವೇಳೆ ಕುಸಿದು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.ಕುಟುಂಬ ಹಿನ್ನೆಲೆಯ ವಿಚಾರದಲ್ಲಿ, ಅವರ ಇಬ್ಬರು ಪುತ್ರರು ಹಾಗೂ ಪತಿ ಈ ಮೊದಲೇ ಮೃತಪಟ್ಟಿದ್ದು, ಅವರು ಒಂಟಿಯಾಗಿದ್ದರು. ದೇವರಲ್ಲಿ ಅಪಾರ ಭಕ್ತಿ ಹೊಂದಿದ್ದ ಅವರು ವಿವಾಹಿತ ಪುತ್ರಿಯನ್ನು ಅಗಲಿದ್ದಾರೆ.ಜಾತ್ರೋತ್ಸವದ ಸಂಭ್ರಮದ ನಡುವೆ ಸಂಭವಿಸಿದ ಈ ಘಟನೆ ಸ್ಥಳೀಯರಲ್ಲಿ ಶೋಕದ ವಾತಾವರಣ ಮೂಡಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts