ನಿಧನ

ನೂತನ ವಸ್ತ್ರಮಳಿಗೆ ಉದ್ಘಾಟನೆಗೆ ಸಜ್ಜಾಗಿದ್ದ ಯುವಕ ಸಲ್ಮಾನ್ ಫಾರಿಶ್ ವಿದ್ಯುತ್ ಆಘಾತಕ್ಕೆ ಬಲಿ!

ಈ ಸುದ್ದಿಯನ್ನು ಶೇರ್ ಮಾಡಿ

ಉಳ್ಳಾಲ: ನೂತನ ವಸ್ತ್ರಮಳಿಗೆಯ ಉದ್ಘಾಟನೆಗೆ ಸಜ್ಜಾಗಿದ್ದ ಯುವಕನೊಬ್ಬ ಮಳಿಗೆಯಲ್ಲೇ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ದುರ್ಘಟನೆ ಮಂಗಳೂರು ತೊಕ್ಕೊಟ್ಟುವಿನ ಹೃದಯ ಭಾಗದಲ್ಲಿ ಸಂಭವಿಸಿದೆ.ಮೃತರನ್ನು ಮೂಲತಃ ಪಜೀರು ಬೆಂಗೋಡಿ ಪದವು ನಿವಾಸಿ ಹಾಗೂ ಸದ್ಯ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿದ್ದ ಸಲ್ಮಾನ್ ಫಾರಿಶ್ (20) ಎಂದು ಗುರುತಿಸಲಾಗಿದೆ.

ತೊಕ್ಕೊಟ್ಟಿನ ವಾಣಿಜ್ಯ ಸಂಕೀರ್ಣದಲ್ಲಿ ಸಲ್ಮಾನ್ ಫಾರಿಶ್ ಅವರ ಮಾಲಕತ್ವದಲ್ಲಿ ನೂತನ ವಸ್ತ್ರಮಳಿಗೆಯೊಂದು ಇದೇ ಶುಕ್ರವಾರ ಉದ್ಘಾಟನೆಗೊಳ್ಳಬೇಕಾಗಿದ್ದು, ಅದರ ಅಂಗವಾಗಿ ಮಳಿಗೆಯ ಒಳ ವಿನ್ಯಾಸ ಹಾಗೂ ವಿದ್ಯುತ್ ಸಂಪರ್ಕ ಸಂಬಂಧಿತ ಕಾಮಗಾರಿ ಭರದಿಂದ ಸಾಗುತ್ತಿತ್ತು.ಭಾನುವಾರ ತಡರಾತ್ರಿ ಸುಮಾರು 1.30 ಗಂಟೆಯ ವೇಳೆಗೆ ಮಳಿಗೆಯ ಒಳಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಲ್ಮಾನ್ ಫಾರಿಶ್ ಅವರಿಗೆ ಆಕಸ್ಮಿಕವಾಗಿ ವಿದ್ಯುತ್ ಆಘಾತ ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಮಳಿಗೆಯಲ್ಲಿದ್ದ ಕಾರ್ಮಿಕರು ಅವರನ್ನು ಆಟೋ ರಿಕ್ಷಾದ ಮೂಲಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಆಸ್ಪತ್ರೆ ತಲುಪುವ ಮುನ್ನವೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಶಿಶಿಲ: ಹಾವು ಕಚ್ಚಿ ಮಹಿಳೆ ಸಾವು! ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಶೌರ್ಯ ವಿಪತ್ತು ನಿರ್ವಹಣಾ ತಂಡ!

ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮಹಿಳೆಯೋರ್ವರಿಗೆ ಹಾವು ಕಚ್ಚಿದ್ದು, ಪುತ್ತೂರು ಸರಕಾರಿ…