ಬಂಟ್ವಾಳ: ಖಾದಿ ಗ್ರಾಮೋದ್ಯೋಗದಲ್ಲಿ 65 ವರ್ಷಗಳ ಕಾಲ ಸೇವೆ ಸಲ್ಲಿದ್ದ ಸದಾಶಿವ ಆಚಾರ್ಯ (94 ವ.) ಅಲ್ಪ ಕಾಲದ ಅಸೌಖ್ಯದಿಂದ ಬಂಟ್ವಾಳ ಭಂಡಾರಿ ಬೆಟ್ಟುವಿನಲ್ಲಿರುವ ಮನೆಯಲ್ಲಿ ಡಿ. 16ರಂದು ರಾತ್ರಿ ನಿಧನ ಹೊಂದಿದರು.
ಮಂಗಳೂರಿನ ಖಾದಿ ಗ್ರಾಮದ್ಯೋಗದಲ್ಲಿ 65 ವರ್ಷಗಳ ಕಾಲ ಪ್ರಾಮಾಣಿಕ ನೌಕರನಾಗಿ ದುಡಿದು, ಬರಿಗಯ್ಯಲ್ಲಿ ನಿವೃತ್ತರಾದರು. ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ಆದರ್ಶದಂತೆ ಖಾದಿ ಬಟ್ಟೆಯನ್ನು ಖರೀದಿಸುವ ಗ್ರಾಹಕರಿಗೆ, ಅಂಗಡಿಯಲ್ಲಿ ಓರ್ವ ಸಾಮಾನ್ಯ ನೌಕರನಾಗಿ ಕೆಲಸ ನಿರ್ವಹಿಸಿದರು.
ಮೃತರು ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರ ರನ್ನು ಅಗಲಿದ್ದಾರೆ.
























