ಪುತ್ತೂರು: ಬನ್ನೂರು ಆನೆಮಜಲು ನಿವಾಸಿ, ಚಂದ್ರಾ ಫ್ಯಾನ್ಸಿ ಮಾಲಕ ದಿನೇಶ್ ಆಚಾರ್ಯ (55) ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲೇ ಕೊನೆಯುಸಿರೆಳೆದಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪುತ್ತೂರು ಲಕ್ಷ್ಮೀವೆಂಕಟರಮಣ ದೇವಸ್ಥಾನದ ಬಳಿ ಇರುವ ಮೇಧಾ ಬಿಲ್ಡಿಂಗ್’ನಲ್ಲಿ ದಿನೇಶ್ ಆಚಾರ್ಯ ಅವರ ತಂದೆ ಪುರುಷೋತ್ತಮ್ ಆಚಾರ್ಯ ಅವರು ಚಂದ್ರಾ ಫ್ಯಾನ್ಸಿ ಸ್ಟೋರ್ ಆರಂಭಿಸಿದ್ದರು.
ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.



















