ಪುತ್ತೂರು: ಕುರಿಯ ಗ್ರಾಮದ ಮಲಾರ್ ನಿವಾಸಿ ಜಯರಾಂ ರೈ ನುಳಿಯಾಲು (73 ವ.) ಅವರು ಅಸೌಖ್ಯದಿಂದ ಗುರುವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ವಿಜಯಾ ಬ್ಯಾಂಕ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದರು. ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿ, ರೋಟರಿ ಕ್ಲಬ್, ಬಂಟಸಿರಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ಸಾಮಾಜಿಕ ಜೀವನದಲ್ಲಿ ಸಕ್ರೀಯರಾಗಿದ್ದರು.
ಮೃತರು ಪುತ್ರ ಹರ್ಷಿತ್ ರೈ, ಸೊಸೆ ದೀಪಾಲಿ ಎಚ್. ರೈ, ಮೊಮ್ಮಗಳು ನವಮಿ ಎಚ್. ರೈ ಅವರನ್ನು ಅಗಲಿದ್ದಾರೆ.