pashupathi
ನಿಧನ

ದೇಹದಾರ್ಡ್ಯ ಪಟು  ಸಂತೋಷ್ ಕುಮಾರ್ ಉಳ್ಳಾಲ ನಿಧನ!!

tv clinic
ರೈಲ್ವೇ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಅವರು ದೇಹದಾರ್ಡ್ಯ ಪಟುವಾಗಿ ಸಂತೋಪ್ ಕುಮಾರ್ ರೈಲ್ವೇಯನ್ನು ಪ್ರತಿನಿಧಿಸಿದ್ದರು

ಈ ಸುದ್ದಿಯನ್ನು ಶೇರ್ ಮಾಡಿ

ಭಾರತ್ ಕಿಶೋರ್ ಟೈಟಲ್ ವಿಜೇತ  ದೇಹದಾರ್ಡ್ಯ ಪಟು  ರೈಲ್ವೇ ಉದ್ಯೋಗಿ ಉಳ್ಳಾಲದ ಜಲ್ಲಿಗುಡ್ಡೆ ನಿವಾಸಿ ಸಂತೋಷ್ ಕುಮಾರ್ ಉಳ್ಳಾಲ್ (52) ಹುಬ್ಬಳ್ಳಿಯಲ್ಲಿ ಗುರುವಾರ ಹೃದಯಾಘಾತದಿಂದ ನಿಧನ ಹೊಂದಿದರು.

akshaya college

ಮೂಲತ: ಉಳ್ಳಾಲ ಉಳಿಯ ನಿವಾಸಿಯಾಗಿದ್ದ ಸಂತೋಷ್ ಕುಮಾ‌ರ್ ತೊಕ್ಕೊಟ್ಟಿನ ಶಕ್ತಿಭಾರತ್ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರು. ಕರ್ನಾಟಕ ಉದಯ, ಭಾರತ್ ಕಿಶೋರ್ ಟೈಟಲ್ ವಿಜೇತರಾಗಿದ್ದರು.

ರೈಲ್ವೇ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಅವರು ದೇಹದಾರ್ಡ್ಯ ಪಟುವಾಗಿ ರೈಲ್ವೇಯನ್ನು ಪ್ರತಿನಿಧಿಸಿದ್ದರು. ಮಂಗಳೂರು ರೈಲ್ವೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಹುಬ್ಬಳ್ಳಿಯಲ್ಲಿ ಸಭೆಯಲ್ಲಿ ಭಾಗವಹಿಸಲು ತನ್ನ ಸಹೋದ್ಯೋಗಿಯೊಂದಿಗೆ ತೆರಳುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts