Gl
ನಿಧನ

ಎಸಿಯಲ್ಲಿ ಕಾಣಿಸಿಕೊಂಡ ಹೊಗೆ: ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಮೃತ್ಯು!!

ಕೂರ್ನಡ್ಕ ಸಂಜಯನಗರ ಶ್ರೀಲಕ್ಷ್ಮೀ ಪ್ರಸನ್ನ ಲೇ ಔಟ್ ನಲ್ಲಿ ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆಯಿಂದಾಗಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾದ ಸುಮಾರು 80 ವರ್ಷ ಪ್ರಾಯದ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರು ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕೂರ್ನಡ್ಕ ಸಂಜಯನಗರ ಶ್ರೀಲಕ್ಷ್ಮೀ ಪ್ರಸನ್ನ ಲೇ ಔಟ್ ನಲ್ಲಿ ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆಯಿಂದಾಗಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾದ ಸುಮಾರು 80 ವರ್ಷ ಪ್ರಾಯದ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರು ನಿಧನರಾದರು.

rachana_rai
Pashupathi
akshaya college

ಸಂಜಯನಗರ ಶ್ರೀಲಕ್ಷ್ಮೀ ಪ್ರಸನ್ನ ಲೇ ಔಟ್ ನಲ್ಲಿ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರ ಮನೆಯಲ್ಲಿ ಜು.4 ರಂದು ಕೊಠಡಿಯಲ್ಲಿನ ಹವಾನಿಯಂತ್ರಣ ಉಪಕರಣದಲ್ಲಿ ದೋಷ ಕಂಡು ಹೊಗೆ ಕಾಣಿಸಿಕೊಂಡಿತ್ತು. ಘಟನೆಗೆ ಸಂಬಂಧಿಸಿ ಮನೆಯ ಕಪಾಟು, ಮಂಚ ಹಾನಿಯಾಗಿದೆ.

pashupathi

ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ತೆರಳಿದ್ದಾರೆ. ಈ ನಡುವೆ ಮನೆಯಲ್ಲಿ ಅನಾರೋಗ್ಯದಲ್ಲಿದ್ದ ವಯೋವೃದ್ಧ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರಿಗೆ ಮನೆಯಲ್ಲಿ ಆವರಿಸಿದ ಹೊಗೆಯಿಂದಾಗಿ ಉಸಿರಾಟದ ತೊಂದರೆ ಆಗಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ. ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ ಅವರು ಆಸ್ಪತ್ರೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts