Gl jewellers
ನಿಧನ

ಈಜಾಡಲು ಹೋಗಿ ಮೂರು ಯುವಕರು ಸಾವು!!

ಕೃಷಿ ಹೊಂಡದಲ್ಲಿ ಈಜಾಡಲು ಹೋಗಿ ಮೂರು ಯುವಕರು ಸಾವನ್ನಪ್ಪಿರುವ ಘಟನೆ ಮುಂತಕದಿರೇನಹಳ್ಳಿ ಗ್ರಾಮದ ಬಳಿಯ ಕೃಷಿ ಹೊಂಡದಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕೃಷಿ ಹೊಂಡದಲ್ಲಿ ಈಜಾಡಲು ಹೋಗಿ ಮೂರು ಯುವಕರು ಸಾವನ್ನಪ್ಪಿರುವ ಘಟನೆ ಮುಂತಕದಿರೇನಹಳ್ಳಿ ಗ್ರಾಮದ ಬಳಿಯ ಕೃಷಿ ಹೊಂಡದಲ್ಲಿ ನಡೆದಿದೆ.

Papemajalu garady
Karnapady garady

ಸಾವನ್ನಪ್ಪಿರುವ ಯುವಕರು ಚಿಂತಾಮಣಿ ತಾಲೂಕು ಕಸಬಾ ಹೋಬಳಿ ಮುಂತಕದಿರೇನಹಳ್ಳಿ ಗ್ರಾಮದ 28 ವರ್ಷದ ಶ್ರೀಕಾಂತ್, 24 ವರ್ಷದ ರಮೇಶ್, 32 ವರ್ಷದ ಲೋಕೇಶ್ ಎಂದು ಗುರುತಿಸಲಾಗಿದೆ.

ಶುಕ್ರವಾರ (ಮಾ.07) ಮಧ್ಯಾಹ್ನ ತಮ್ಮ ಗ್ರಾಮದ ಬಳಿಯ ಅಬ್ಬಗುಂಡು ಪ್ರಸಾದ್‌ ರವರಿಗೆ ಸೇರಿದ ಕೃಷಿ ಹೊಂಡದಲ್ಲಿ ಈಜಾಡಲು ಹೋಗಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಸಿಐ ಶಿವರಾಜ್, ಪಿಎಸ್‌ಐ ಮಮತ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಆಗ್ನಿ ಶಾಮಕದಳದ ಸಿಬ್ಬಂದಿಯಾದ ಲೋಕೇಶ್, ಶಿವಾರೆಡ್ಡಿ, ಶಿವಶಂಕ‌ರ್, ಚೆನ್ನಪ್ಪ, ವಿಷ್ಣು, ವಿವೇಕ್ ಮತ್ತಿತರರು ಭೇಟಿ ನೀಡಿ, ಕೃಷಿ ಹೊಂಡದಲ್ಲಿ ಬಿದಿದ್ದ ಯುವಕರ ಶವಗಳನ್ನು ಹೊರ ತೆಗೆಯವಲ್ಲಿ ಯಶಸ್ವಿಯಾಗಿದ್ದು, ಸ್ಥಳದಲ್ಲಿ ಮೃತ ಯುವಕರ ಸಂಬಂಧಕರ ಆಕ್ರಂಧನ ಮುಗಿಲು ಮುಟ್ಟಿತ್ತು.

ಕೃಷಿ ಹೊಂಡದಲ್ಲಿ ವಿದ್ಯುತ್ ಶಾಕ್ ಆಗಿ ಯುವಕರು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು, ಪೊಲೀಸರ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೊರಬರಬೇಕಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts