ಅಪಘಾತ

ಬೈಕ್ ಗಳ ನಡುವೆ ಅಪಘಾತ: ಯುವ ಛಾಯಾಗ್ರಾಹಕ ರಕ್ಷಿತ್ ಶೆಟ್ಟಿ ಮೃತ್ಯು!!

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ: ಎರಡು ಬೈಕ್ ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಛಾಯಾಗ್ರಾಹಕ ಸಾವನ್ನಪ್ಪಿದ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.

chennai-shopping
Shani-pooja

ಶಂಭೂರು ನಿವಾಸಿ ರಕ್ಷಿತ್ ಶೆಟ್ಟಿ (43) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ನಿನ್ನೆ (ಮಾ.14) ರಾತ್ರಿ ವಾಣೆಮಂಗಳೂರು ಎಂಬಲ್ಲಿ ಎರಡು ಬೈಕ್‌ ಗಳ ನಡುವೆ ಅಪಘಾತ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಕ್ಷಿತ್ ಅವರನ್ನ ಮಂಗಳೂರು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಅದರ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಬಗ್ಗೆ ಪೋಲೀಸ್ ಇಲಾಖೆ ಮಾಹಿತಿ ನೀಡಿದೆ.

ಛಾಯಾಗ್ರಾಹಕ ಸಂಘದ ಬಂಟ್ವಾಳ ವಲಯದ ಸಕ್ರೀಯ ಸದಸ್ಯರಾಗಿದ್ದ ರಕ್ಷಿತ್ ಅವರು ಅತ್ಯುತ್ತಮ ವಿಡಿಯೋಗ್ರಾಫರ್ ರಾಗಿದ್ದರು. ರಕ್ಷಿತ್ ಅವರ ಮಗಳ 10 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ನಾಳೆ (ಮಾ.15) ಮನೆಯಲ್ಲಿ ನಡೆಸಲು ತಯಾರಿಗಳು ಮಾಡಲಾಗಿತ್ತು. ಮಗಳ ಹುಟ್ಟು ಹಬ್ಬದ ಸಂಭ್ರಮದ ಮನೆಯೀಗ ತಂದೆಯ ಸಾವಿನಿಂದ ಮೌನವಾಗಿ ರೋಧಿಸುತ್ತಿದೆ.

ರಕ್ಷಿತ್ ಸಹೋದರ ರಂಜಿತ್ ಅವರು ಕೂಡ ಸುಮಾರು ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮಲಗಿದ ಸ್ಥಿತಿಯಲ್ಲಿ ಮನೆಯಲ್ಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts