ಮಂಗಳೂರು: ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಸಮೀಪದ ಮುಡಿಪು ಬಳಿಯ ಬೋಳಿಯಾರ್ ನಿವಾಸಿಯಾಗಿದ್ದ 28 ವರ್ಷದ ಯುವಕ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೃತರನ್ನು ಬೋಳಿಯಾರ್‌ನ ಬಿ.ಎಚ್. ಕರೀಂ ಅವರ ಪುತ್ರ ಮುಹಮ್ಮದ್ ರಿಜ್ವಾನ್ ಎಂದು ಗುರುತಿಸಲಾಗಿದೆ.
ಹಲವು ವರ್ಷಗಳಿಂದ ಖಾಸಗಿ ಸಂಸ್ಥೆಯೊಂದರ ಮೂಲಕ ಮೀನು ಸಾಗಣೆ ಟ್ರಕ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಫೆಬ್ರವರಿ 23ರಂದು ರತ್ನಗಿರಿಗೆ ಸರಕು ಸಾಗಣೆಗಾಗಿ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೀನು ಸರಕನ್ನು ತಲುಪಿಸುವ ಕಾರ್ಯದಲ್ಲಿದ್ದ ರಿಜ್ವಾನ್ ಅವರ ಟ್ರಕ್, ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಮೃತರು ತಂದೆ-ತಾಯಿ, ಪತ್ನಿ, ಎರಡು ವರ್ಷದ ಮಗುವು ಸೇರಿದಂತೆ ಮೂವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.






















