ಅಪಘಾತ

ಕುಂಬ್ರ:ಕಾರು-ರಿಕ್ಷಾ ಅಪಘಾತ;ಬಾಲಕಿ ಶಜ್ವಾ ಫಾತಿಮಾ ಮೃತ್ಯು..!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕುಂಬ್ರ ಸಮೀಪದ ಪರ್ಪುಂಜ ಕೊಯಿಲತ್ತಡ್ಕ ಅಬೋಡ್ ಹಾಲ್ ಬಳಿ ನವೆಂಬರ್ 1ರಂದು ಸಂಜೆ ಕಾರು ಹಾಗೂ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದು ಬಾಲಕಿ ದುರ್ಮರಣ ಹೊಂದಿದ್ದಾಳೆ.

core technologies

ಪುತ್ತೂರುನಿಂದ ತಿಂಗಲಾಡಿ ಕಡೆಗೆ ತೆರಳುತ್ತಿದ್ದ ರಿಕ್ಷಾ, ಸುಳ್ಯ ದಿಕ್ಕಿನಿಂದ ಪುತ್ತೂರಿನತ್ತ ಬರುತ್ತಿದ್ದ ಕಾರು ತೀರಾ ವಿರುದ್ದ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

akshaya college

ಅಪಘಾತದಲ್ಲಿ ರಿಕ್ಷಾ ಚಾಲಕ ಹನೀಫ್ ಬನ್ನೂರ್ ಅವರ ಆರು ವರ್ಷದ ಮಗಳು ಶಜ್ವಾ ಫಾತಿಮಾ ಮೃತಪಟ್ಟಿದ್ದಾಳೆ. ಇತರ ಐದು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಗಾಯಗೊಂಡವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts