ಕ್ಯಾಂಟರ್ ವಾಹನದಿಂದ ಟ್ರ್ಯಾಕ್ಟರ್ ಇಳಿಸುವಾಗ ನಿಯಂತ್ರಣ ತಪ್ಪಿ ಮೈಮೇಲೆ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಧಾರವಾಡ ಕೃಷಿ ಮೇಳದ ಅಂಗಳದಲ್ಲಿ ಶನಿವಾರ ನಡೆದಿದೆ.
ತುಮಕೂರು ಮೂಲದ ಪರಶುರಾಮ ಎಂ. (32) ಮೃತಪಟ್ಟವರು. ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ತಂದ ಟ್ರ್ಯಾಕ್ಟರ್ ಕ್ಯಾಂಟರ್ ವಾಹನದಿಂದ ಇಳಿಸುವಾಗ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.