ಅಪಘಾತ

ಕರ್ನಾಟಕದ ಖ್ಯಾತ ಬಾಡಿ ಬಿಲ್ಡ‌ರ್ ಸುರೇಶ್ ಕಾರು ಅಪಘಾತದಲ್ಲಿ ಸಾವು!!

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕದ ಖ್ಯಾತ ಬಾಡಿ ಬಿಲ್ಡರ್ ಅಮೆರಿಕದಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಕೋಲಾರದ ಗಾಂಧಿನಗರದ ಚಲಪತಿ, ಮುನಿಯಮ್ಮ ದಂಪತಿ ಪುತ್ರ ಸುರೇಶ್ ಕುಮಾರ್ (42) ಕಾರು ಅಪಘಾತದಲ್ಲಿ ಮೃತರಾಗಿದ್ದಾರೆ.

akshaya college

ಸುರೇಶ್ ಕುಮಾ‌ರ್ ಖ್ಯಾತ ಬಾಡಿ ಬಿಲ್ಡರ್ ಆಗಿದ್ದು, ಅಮೆರಿಕಾದ ಫ್ಲೋರಿಡಾ ಹಾಗೂ ಟೆಕ್ಸಾಸ್ ನಗರದ ಮಧ್ಯೆ ಕಾರಿನಲ್ಲಿ ಕೆಲಸದ ನಿಮಿತ್ತ ಹೋಗುತ್ತಿದ್ದರು. ಆಗ ಭೀಕರ ಅಪಘಾತವಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ತೀವ್ರವಾರದ ಪೆಟ್ಟುಗಳು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಬಾಡಿ ಬಿಲ್ಡರ್ ಸಾವಿಗೀಡಾಗಿದ್ದಾರೆ.

ಫ್ಲೋರಿಡಾದಲ್ಲಿ ಫಿಸಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸುರೇಶ್ ಕುಮಾರ್, ಬಾಡಿ ಬಿಲ್ಡರ್ ಜೊತೆ ಮಾಡೆಲಿಂಗ್‌ನಲ್ಲಿ ಕೂಡಾ ಹೆಸರು ಮಾಡಿದ್ದರು. ದೆಹಲಿ ಮೂಲದ ಯುವತಿಯನ್ನು  ಮದುವೆಯಾಗಿದ್ದರು.

ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಸುರೇಶ್ ಅವರು ನಂತರ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದರು. ಇತ್ತೀಚೆಗೆ ಕೋಲಾರಕ್ಕೆ ಬಂದಿದ್ದ ಅವರು ಪತ್ನಿ ಮಕ್ಕಳ ಜೊತೆಯಲ್ಲಿಯೇ ಯುಎಸ್ ಎ ಉಲ್ಲು ವಾಸವಾಗಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts