ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಷಿಯನ್ ಬೋಟ್ ಅಲೆಗಳ ಹೊಡೆತಕ್ಕೆ ಭಟ್ಕಳ ತಾಲೂಕಿನ ನೇತ್ರಾಣಿ ಬಳಿ ಮುಳುಗಿದೆ. . ಬೋಟ್ ನಲ್ಲಿದ್ದ 25 ಜನ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಭಟ್ಕಳದ ಅಣ್ಣಪ್ಪ ಮೊಗೇರ್ ಎಂಬವರಿಗೆ ಸೇರಿದ ಮಹಾ ಮುರುಡೇಶ್ವರ ಹೆಸರಿನ ಪರ್ಷಿಯನ್ ಬೋಟ್ ಆಗಿದ್ದು ಮೀನುಗಾರಿಕೆಗೆ ಅರಬ್ಬಿ ಸಮುದ್ರದಲ್ಲಿ ಹೋಗುತ್ತಿರುವಾಗ ಅಲೆಗಳ ಅಬ್ಬರಕ್ಕೆ ಬೋಟ್ ಮುಳುಗಡೆಯಾಗಿದೆ. ತಕ್ಷಣ ಕರಾವಳಿ ಕಾವಲುಪಡೆ ಕಂಟ್ರೋಲ್ ರೂಮ್‌ಗೆ ಕರೆಮಾಡಿದ್ದು, ಸ್ಥಳೀಯ ವೆಲ್ಲನ್ಶಿಣಿ ಮತ್ತು ಮಚ್ಚೆದುರ್ಗ ಎಂಬ ಎರಡು ಬೋಟ್ ಗಳು ಸಹಾಯಕ್ಕೆ ಆಗಮಿಸಿ 25 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಬೋಟ್ ಮುಳುಗಿದ್ದರಿಂದ ಅಂದಾಜು 80 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಾಗಿದೆ.