ಅಪಘಾತ

ಕಾಪು: ಖ್ಯಾತ ಡಿಜೆ, ನಿರೂಪಕ ಮರ್ವಿನ್ ಅಪಘಾತದಲ್ಲಿ ಮೃತ್ಯು!! 

ಈ ಸುದ್ದಿಯನ್ನು ಶೇರ್ ಮಾಡಿ

ಕಾಪು : ನಾಯಿಯನ್ನು ತಪ್ಪಿಸಲು ಹೋಗಿ ಬೆಲ್ಮಣ್ ನಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಕಾರೊಂದು ಪಲ್ಟಿಯಾದ ಘಟನೆ ಮೂಳೂರಿನ ಹಳ್ಳಿಮನೆ ಹೋಟೆಲಿನ ಮುಂಭಾಗದಲ್ಲಿ ಇಂದು  (ಆ.23) ಶನಿವಾರ ಮುಂಜಾನೆ ನಡೆದಿದೆ.

akshaya college

ಗಂಭೀರ ಗಾಯಗೊಂಡ ಖ್ಯಾತ ಡಿಜೆ ಮತ್ತು ನಿರೂಪಕ ಮರ್ವಿನ್ ಸ್ಥಳದಲ್ಲೇ ಮೃತಪಟ್ಟಿದ್ದು, ಬೆಲ್ಮಣ್ ನ ಪ್ರಜ್ವಲ್, ಕಾರ್ಕಳದ ಪ್ರಸಾದ್, ವಿಶ್ಲೇಷ್ ಗಾಯಗೊಂಡಿದ್ದಾರೆ.

ಮೃತ ಮರ್ವಿನ್ ಖ್ಯಾತ ಕಾರ್ಯಕ್ರಮ ನಿರೂಪಕನಾಗಿದ್ದು, ರೋಟರಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು.

ಗಾಯಾಳುಗಳನ್ನು ಮೂಳೂರು ಹಾಗೂ ಉಚ್ಚಿಲದ ಆ್ಯಂಬುಲೆನ್ಸ್ ಸಹಾಯದಿಂದ ಜಲಾಲುದ್ದೀನ್ ಯಾನೆ ಜಲ್ಲು, ಹಮೀದ್ ಉಚ್ಚಿಲ, ಕೆ.ಎಂ.ಸಿರಾಜ್, ಅನ್ವರ್ ಕೋಟೇಶ್ವರ ಹಾಗೂ ಪೋಲಿಸ್ ಸಿಬ್ಬಂದಿಗಳ ಸಹಕಾರದೊಂದಿಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪೆರ್ನಾಜೆ ಬಳಿ ಬಸ್ – ಕಾರು ಅಪಘಾತ! ರಸ್ತೆಯಲ್ಲಿ ಚೆಲ್ಲಿದ್ದ ತೈಲಕ್ಕೆ ಜಾರಿದ ಕೆವಿಜಿ ನಿವೃತ್ತ ಪ್ರಾಂಶುಪಾಲರಿದ್ದ ಕಾರು!!

ಪುತ್ತೂರು: ಸುಳ್ಯದಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಕಾರು ಹಾಗೂ ಮೈಸೂರು ಕಡೆ ತೆರಳುತ್ತಿದ್ದ…