ವಕೀಲರೊಬ್ಬರು ಹೈಕೋರ್ಟ್ ಆವರಣದಲ್ಲಿ ಹೃದಯಾಘಾತಗೊಂಡು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಅನಂತ ನಾಗೇಶ್ವರ ರಾವ್ (45) ಹೃದಯಾಘಾತದಿಂದ ಮೃತಪಟ್ಟ ವಕೀಲ.
ಗುರುವಾರ ಮಧ್ಯಾಹ್ನ ತೆಲಂಗಾಣದ ಹೈಕೋರ್ಟ್ ಆವರಣದಲ್ಲಿ ಸಂಭವಿಸಿದ್ದು ಘಟನೆಯ ಕೋರ್ಟ್ ಆವರಣದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ಸೆರೆಯಾದ ದೃಶ್ಯದಲ್ಲಿ ವಕೀಲರೊಬ್ಬರು ಹೈಕೋರ್ಟ್ ಆವರಣದಲ್ಲಿರುವ ಆಸನದಲ್ಲಿ ಕುಳಿತಿದ್ದು ಕೆಲವು ಹೊತ್ತಿನ ಬಳಿಕ ಇದ್ದಕಿದ್ದಂತೆ ಕುಳಿತಲ್ಲೇ ಕುಸಿದು ಬಿದ್ದಿದ್ದಾರೆ ಈ ವೇಳೆ ಅಲ್ಲೇ ಇದ್ದ ಇತರರು ವಕೀಲರ ಸಹಾಯಕ್ಕೆ ಬಂದಿದ್ದಾರೆ. ಬಳಿಕ ಹೈಕೋರ್ಟ್ ಸಿಬ್ಬಂದಿಗಳು ವಕೀಲನನ್ನು ಆಸನದಲ್ಲಿ ಮಲಗಿಸಿ ಆರೈಕೆ ಮಾಡುತ್ತಿರುವುದು ಕಾಣಬಹುದು. ಇದಾದ ಬಳಿಕ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆದರೆ ದುರಾದೃಷ್ಟವಶಾತ್ ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ಕುಟುಂಬ ಸದಸ್ಯರು, ನಾಗೇಶ್ವರ ರಾವ್ ಗುರುವಾರ ಮುಂಜಾನೆ ಕೋರ್ಟ್ ಕೆಲಸಕ್ಕಾಗಿ ಹೈದರಾಬಾದ್‌ನ ಹೈಕೋರ್ಟ್‌ಗೆ ಹೋಗಿದ್ದರು. ನ್ಯಾಯಾಲಯದ ಆವರಣದಲ್ಲಿ ಪ್ರಕರಣದ ಕಡತಗಳನ್ನು ಪರಿಶೀಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ.