ಅಪಘಾತ

ಸಂಪಾಜೆ: ಕಾರು-ಟಿಪ್ಪ‌ರ್ ಅಪಘಾತ; ಕಾರಿನಲ್ಲಿದ್ದ ನಾಲ್ವರೂ ಸಾವು!!

ಈ ಸುದ್ದಿಯನ್ನು ಶೇರ್ ಮಾಡಿ

ಸಂಪಾಜೆ:  ಕೊಯನಾಡು ಸಮೀಪದ ದೇವರಕೊಲ್ಲಿ ಬಳಿ ಸಂಭವಿಸಿದ ಕಾರು ಮತ್ತು ಟಿಪ್ಪ‌ರ್ ನಡುವಿನ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರೂ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ.

Shani-pooja

ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ (205 ಮೈಸೂರು ರಾ.ಹೆದ್ದಾರಿಯ ಕೊಯನಾಡು ಸಮೀಪದ ದೇವರಕೊಲ್ಲಿ ಬಳಿ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದಿದ್ದಾಗಿ ಹೇಳಲಾಗಿದೆ.

ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.ಆದರೆ ಈ ನಡುವೆ ಅವರೂ ಕೂಡಾ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. ಕೊಡಗು ಜಿಲ್ಲೆಯ ಗೋಣಿಕೊಪ್ಪ ಮೂಲದ ಕಾರು ಇದಾಗಿದ್ದು, ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ಮೃತರೆಲ್ಲರೂ ಒಂದೇ ಊರಿನವರು ಎಂದು ಹೇಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts