Gl
ಅಪಘಾತ

ಜು.16ರಂದು ಯೆಮೆನ್ನಲ್ಲಿರುವ ಕೇರಳ ನರ್ಸ್ಗೆ ಗಲ್ಲುಶಿಕ್ಷೆ! ಈಕೆ ಮಾಡಿದ ತಪ್ಪಾದರೂ ಏನು?

ಯೆಮೆನ್ ದೇಶದ ಪ್ರಜೆಯ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಇದೀಗ ಗಲ್ಲುಶಿಕ್ಷೆ ಖಚಿತವಾಗಿದೆ. ಇದೇ ಜುಲೈ 16ರಂದು ಪ್ರಿಯಾಳನ್ನು ಗಲ್ಲಿಗೇರಿಸಲಾಗುವುದು ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಶೇರ್ ಮಾಡಿ

ಯೆಮೆನ್ ದೇಶದ ಪ್ರಜೆಯ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಇದೀಗ ಗಲ್ಲುಶಿಕ್ಷೆ ಖಚಿತವಾಗಿದೆ. ಇದೇ ಜುಲೈ 16ರಂದು ಪ್ರಿಯಾಳನ್ನು ಗಲ್ಲಿಗೇರಿಸಲಾಗುವುದು ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

rachana_rai
Pashupathi
akshaya college

ನಿಮಿಷಾ ಪ್ರಿಯಾಳ ತಾಯಿ ಪ್ರೇಮಾ ಕುಮಾರಿ ಅವರಿಗೆ ಪವರ್ ಆಫ್ ಅಟಾರ್ನಿ ಹೊಂದಿರುವ ಮಾನವ ಹಕ್ಕುಗಳ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಮತ್ತು ಯೆಮೆನ್ ಜೈಲಾಧಿಕಾರಿಗಳು ಆಕೆಯನ್ನು ಗಲ್ಲಿಗೇರಿಸುವ ದಿನಾಂಕವನ್ನು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. 2017ರಲ್ಲಿ ತನ್ನ ವ್ಯವಹಾರದ ಪಾಲುದಾರನಾಗಿದ್ದ ವಿವಾಹಿತ ತಲಾಲ್ ಅಬ್ದೋ ಮಹ್ದಿಯನ್ನು ಕೊಲೆಗೈದ ಆರೋಪದಡಿ ಕೇರಳ ಮೂಲದ ನರ್ಸ್​ ನಿಮಿಷಾಳನ್ನು ಬಂಧಿಸಲಾಯಿತು.

pashupathi

ಮೂರು ವರ್ಷಗಳ ಬಳಿಕ, 2020ರಲ್ಲಿ ಯೆಮೆನ್ ನ್ಯಾಯಾಲಯವು ಈ ಪ್ರಕರಣದಲ್ಲಿ ಆಕೆಗೆ ಮರಣದಂಡನೆ ವಿಧಿಸಿತು. ಈ ಆದೇಶವನ್ನು ಪ್ರಶ್ನಿಸಿ ಪ್ರಿಯಾ ತಾಯಿ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಆದರೆ, 2023ರಲ್ಲಿ ಪ್ರೇಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಪ್ರಿಯಾಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಕೋರ್ಟ್​, ಇದೀಗ ಆಕೆಯನ್ನು ಗಲ್ಲಿಗೇರಿಸುವ ದಿನಾಂಕವನ್ನು ನಿಗದಿಪಡಿಸಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಪ್ರಿಯಾ, ತನ್ನ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿದ ಬಳಿಕ 2011ರಲ್ಲಿ ಯೆಮೆನ್‌ಗೆ ತೆರಳಿದರು. ವರದಿಗಳ ಪ್ರಕಾರ, ತನ್ನ ಬಡ ಕುಟುಂಬವನ್ನು ಬೆಂಬಲಿಸಲು ದೇಶ ತೊರೆದು ಹೋದ ಪ್ರಿಯಾ, ಅಲ್ಲಿ ತನ್ನದೇ ಆದ ಒಂದು ಕ್ಲಿನಿಕ್ ತೆರೆಯುವ ನಿರ್ಧಾರಕ್ಕೆ ಮುಂದಾಗಿದ್ದೇ ಇಂದು ಆಕೆಯ ಗಲ್ಲು ಶಿಕ್ಷೆಗೆ ಕಾರಣವಾಗಿದೆ.

ಯೆಮೆನ್​ ಹಲವು ಆಸ್ಪತ್ರೆಗಳಲ್ಲಿ ನರ್ಸ್​ ಆಗಿ ಕೆಲಸ ಮಾಡಿದ್ದ ಪ್ರಿಯಾ, ಒಂದಷ್ಟು ಅನುಭವ ಪಡೆದ ನಂತರ ತನ್ನದೇ ಹೊಸ ಕ್ಲಿನಿಕ್ ತೆರಯುವ ಹಂಬಲ ಹೊಂದಿದ್ದಳು. ಇದಕ್ಕೆ ಅಲ್ಲಿ ತನಗೆ ಪರಿಚಯವಿದ್ದ ತಲಾಲ್ ಅಬ್ದೋ ಮಹ್ದಿ ಮತ್ತು ಆಕೆಯ ಪತ್ನಿ ಅವರನ್ನು ಸಂಪರ್ಕಿಸಿದ್ದಳು. 2014ರಲ್ಲಿ ಮಹ್ದಿ ಎಂಬಾತ ಯೆಮನ್‌ನಲ್ಲಿ ಪ್ರಿಯಾಗೆ ಕ್ಲಿನಿಕ್ ಪ್ರಾರಂಭಿಸಲು ಸಹಾಯ ಮಾಡುವುದಾಗಿ ಭರವಸೆ ಕೊಟ್ಟ. ಇಲ್ಲಿಂದಲೇ ಆಕೆಯ ಗ್ರಹಚಾರ ಕೆಟ್ಟಿದ್ದು.

ಸಹಾಯ ಮಾಡುವ ನೆಪದಲ್ಲಿ ಪ್ರಿಯಾಳನ್ನು ದುರಪಯೋಗ ಪಡಿಸಿಕೊಳ್ಳಲು ಮುಂದಾದ ಮಹ್ದಿ, ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಆಕೆಗೆ ಒತ್ತಾಯಿಸಿದ್ದ. ವಿಪರೀತ ಹಿಂಸೆಯ ಬೆನ್ನಲ್ಲೇ ಆಕೆ ಮಹ್ದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಂಧಿತನಾಗಿದ್ದ ಮಹ್ದಿ, 2016ರಲ್ಲಿ ಜೈಲಿನಿಂದ ಹೊರಬಂದ. 2017ರಲ್ಲಿ ಆಕೆಗೆ ಇನ್ನಷ್ಟು ಹಿಂಸೆ ಕೊಡಲು ಮುಂದಾದ ಎಂದು ವರದಿಗಳು ತಿಳಿಸಿವೆ. ಮಹ್ದಿ, ಪ್ರಿಯಾ ಬಳಿಯಿದ್ದ ಪಾಸ್‌ಪೋರ್ಟ್ ಅನ್ನು ಕಸಿದುಕೊಂಡಿದ್ದ. ಇದರಿಂದ ಕಂಗಾಲಾಗಿದ್ದ ಪ್ರಿಯಾ, ಆತನಿಂದ ಪಾಸ್​ಪೋರ್ಟ್​ ಪಡೆದು ಭಾರತಕ್ಕೆ ಹೋಗುವ ತವಕದಲ್ಲಿದ್ದಳು. ಇವನಿಂದ ಹೇಗಾದರೂ ಮುಕ್ತಿ ಪಡೆಯಬೇಕು ಎಂದು ಸಂಚು ರೂಪಿಸಿದ ಪ್ರಿಯಾ, ಮಹ್ದಿಗೆ ನಿದ್ರಾಜನಕ ನೀಡಿದ್ದಳು. ಆದರೆ, ಓವರ್​ಡೋಸ್​ನಿಂದ ಆತ ಸತ್ತುಬಿದ್ದಿದ್ದ.

ಕೊಲೆಗೈದ ಬಳಿಕ ಹೇಗೋ ದೇಹವನ್ನು ತನ್ನ ಸ್ನೇಹಿತೆಯೊಂದಿಗೆ ವಿಲೇವಾರಿ ಮಾಡಿದ್ದ ಪ್ರಿಯಾ, ಕೊಲೆ ಆರೋಪದಡಿ ಸಿಕ್ಕಿಬಿದ್ದಳು. ಈ ವೇಳೆ ಆಕೆಯ ಕೈವಾಡ ಇರುವುದು ದೃಢವಾಯಿತು. ಹತ್ಯೆ ಕೇಸ್ನಡಿ ಯೆಮೆನ್ ಪೊಲೀಸರು ಆಕೆಯನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಕೋರ್ಟ್ ಪ್ರಿಯಾಳ ಸ್ನೇಹಿತೆಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಪ್ರಿಯಾಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ಈಗ ಮರಣದಂಡನೆಗೆ ದಿನಾಂಕ ಕೂಡ ನಿಗದಿಯಾಗಿದ್ದು, ಇದೇ ಜುಲೈ 16ರಂದು ಎಂದು ಹೇಳಲಾಗಿದೆ,


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts