ಪುತ್ತೂರು: ಕುಂಬ್ರದಲ್ಲಿ ಬಸ್ ಚಾಲನೆಯ ಸಂದರ್ಭದಲ್ಲಿ ಚಾಲಕನ ಸಕ್ಕರೆ ಮಟ್ಟ ಕುಸಿದಿದ್ದರೂ, ತಕ್ಷಣವೇ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಅಪಾಯದಿಂದ ಕಾಪಾಡಿದ ಘಟನೆ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್‌ನ ಚಾಲಕ ದಯಾನಂದ, ಪುತ್ತೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದಾಗ, ಕುಂಬ್ರ ಜಂಕ್ಷನ್‌ಗೆ ತಲುಪುವ ವೇಳೆಗೆ ತನ್ನ ಆರೋಗ್ಯದಲ್ಲಿ ಏರಿಳಿತ ಕಂಡುಬಂದಿತು. ತಕ್ಷಣವೇ ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿದ ಅವರು, ಸ್ಟೀರಿಂಗ್ ಮೇಲೆ ಕುಸಿದು ಬಿದ್ದರು.
ಸ್ಥಳೀಯರು ದಯಾನಂದ ಅವರನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ದು ಪರಿಶೀಲಿಸಿದಾಗ, ಸಕ್ಕರೆ ಮಟ್ಟ ಕಡಿಮೆಯಾಗಿರುವುದು ದೃಢಪಟ್ಟಿತು. ಚೇತರಿಸಿಕೊಂಡ ಬಳಿಕ ಅವರನ್ನು ಮನೆಗೆ ಕಳುಹಿಸಲಾಯಿತು. ಪ್ರಯಾಣಿಕರಿಗಾಗಿ ಬದಲಿ ಬಸ್ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿ ಮಾಡಿತು.