ಮಂಗಳೂರು: ನಗರ ಜಪ್ಪಿನಮೊಗರು ಬಳಿ ರಾಷ್ಟ್ರೀಯಹೆದ್ದಾರಿ 66 ರಲ್ಲಿ ಜೂ18 ರಂದು ನಸುಕಿನ 1.30 ವೇಳೆಗೆ ಸಂಭವಿಸಿದ ಕಾರು ಅಪಘಾತಕ್ಕೆ ಚಾಲಕ ಮದ್ಯ ಸೇವಿಸಿ ಅತೀವೇಗದಲ್ಲಿ ಚಲಾಯಿಸಿದ್ದೆ ಕಾರಣ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಅಮನ್ ರಾವ್ (22) ಸಹ ಪ್ರಯಾಣಿಕ ಓಂ ಶ್ರೀ(24) ರವರು ಮೃತಪಟ್ಟು, ಸಹ ಪ್ರಯಾಣಿಕರಾದ ಆಶಿಶ್(23), ವಿದೇಶಿ ಪ್ರಜೆ ಜೆರಿ (23) ರವರುಗಳು ಗಾಯಗೊಂಡಿದ್ದಾರೆ.
ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಂಚಾರ ದಕ್ಷಿಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Mangaluru:ಜಪ್ಪಿನಮೊಗರು ಕಾರು ಅಪಘಾ*ತಕ್ಕೆ ಚಾಲಕ ಮದ್ಯ ಸೇವಿಸಿದ್ದು ಕಾರಣ
ಇಬ್ಬರು ಸಾ*ವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು…