pashupathi
ಅಪಘಾತ

ಕೆರೆಗೆ ಬಿದ್ದು ಮೃತಪಟ್ಟ ಅವಳಿ ಮಕ್ಕಳು..!!

tv clinic
ಮನೆಯ ಎದುರು ಆಟವಾಡುತ್ತಾ ಕೆರೆಗೆ ಬಿದ್ದು ಮೂರೂ ವರ್ಷದ ಅವಳಿ ಮಕ್ಕಳು ಜೀವ ಕಳೆದುಕೊಂಡ ಹೃದಯವಿದ್ರಾವಕ ಘಟನೆ ತಾಲೂಕಿನ ಯರಿನಾರಾಯಣಪೂರ ಗ್ರಾಮದಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮನೆಯ ಎದುರು ಆಟವಾಡುತ್ತಾ ಕೆರೆಗೆ ಬಿದ್ದು ಮೂರೂ ವರ್ಷದ ಅವಳಿ ಮಕ್ಕಳು ಜೀವ ಕಳೆದುಕೊಂಡ ಹೃದಯವಿದ್ರಾವಕ ಘಟನೆ ತಾಲೂಕಿನ ಯರಿನಾರಾಯಣಪೂರ ಗ್ರಾಮದಲ್ಲಿ ನಡೆದಿದೆ.

akshaya college

ಯರಿನಾರಾಯಣಪೂರ ಗ್ರಾಮದ ಶರೀಫಸಾಬ ಚಂದುಖಾನ ಅವರ ಅವಳಿ ಮಕ್ಕಳಾದ ಮುಜಮ್ಮಿಲ್(03) ಹಾಗೂ ಮುದಸ್ಟಿರ(03) ದುರಂತದಲ್ಲಿ ಉಸಿರು ಚೆಲ್ಲಿದ ಕಂದಮ್ಮಗಳು.

ತಂದೆ ಶರೀಫಸಾಬ ಅವರು ಅನಾರೋಗ್ಯದಿಂದ ಬಳುತ್ತಿದ್ದರೆ. ತಾಯಿ ಕೆಲಸಕ್ಕೆ ಹುಬ್ಬಳ್ಳಿಗೆ ಹೋದ ಸಮಯದಲ್ಲಿ ಮನೆಯಲ್ಲಿ ಅಜ್ಜಿ ಮಾತ್ರ ಇದ್ದು ಈ ಸಮಯದಲ್ಲಿ ಅಜ್ಜಿ ಮನೆಯ ಕೆಲಸ ಮಾಡುತ್ತಿದ್ದ ವೇಳೆ ಮಕ್ಕಳು ಆಟವಾಡುತ್ತಾ ಮನೆಯ ಪಕ್ಕದಲ್ಲಿದ್ದ ಕೆರೆಗೆ ಆಯತಪ್ಪಿ ಬಿದ್ದಿದ್ದಾರೆ. ಮನೆಯಲ್ಲಿ ಮಕ್ಕಳು ಕಾಣದೇ ಇದ್ದಾಗ ಘಟನೆ ಬೆಳಕಿಗೆ ಬಂದಿದೆ.

ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿದೆ. ಸ್ಥಳಕ್ಕೆ ತಹಶಿಲ್ದಾರ ರಾಜು ಮಾವರಕರ ಹಾಗೂ ತಾ ಪಂ ಇಒ ಹಾಗೂ ಜಗದೀಶ ಕಮ್ಮಾರ ಕುಂದಗೋಳ ಪೋಲಿಸ ಠಾಣೆಯ ಅಧಿಕಾರಿಗಳು ಆಗಮಿಸಿ ಪರಿಶಿಲನೆ ನಡೆಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts