pashupathi
ಅಪಘಾತ

ದರ್ಬೆ: ನಂದಿ ಕೇಶ್ವರ ಎಲೆಕ್ಟ್ರಿಕಲ್ಸ್  ‘ನಲ್ಲಿ ಬೆಂಕಿ ಅವಘಡ.!!

tv clinic
ದರ್ಬೆ ಮುಖ್ಯ ರಸ್ತೆಯ ಸಮೀಪದ ವಾಣಿಜ್ಯ ಸಂಕೀರ್ಣವೊಂದರ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ 'ನಂದಿ ಕೇಶ್ವರ ಇಲೆಕ್ಟಿಕಲ್ಸ್' ಸಂಸ್ಥೆಯ ಸರ್ವಿಸ್ ವಿಭಾಗದಲ್ಲಿ ಜೂನ್. 17 ರಂದು ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅವಘಢ ಸಂಭವಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು :ದರ್ಬೆ ಮುಖ್ಯ ರಸ್ತೆಯ ಸಮೀಪದ ವಾಣಿಜ್ಯ ಸಂಕೀರ್ಣವೊಂದರ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ‘ನಂದಿ ಕೇಶ್ವರ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಸರ್ವಿಸ್ ವಿಭಾಗದಲ್ಲಿ ಜೂನ್. 17 ರಂದು ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅವಘಢ ಸಂಭವಿಸಿದೆ.

akshaya college

   

ಘಟನೆಯ ವಿವರ:

ಬೆದ್ರಳಾ ನಿವಾಸಿ ಕೇಶವ ಬೆದ್ರಾಳ ಅವರ ಮಾಲಕತ್ವದ ಈ ಸಂಸ್ಥೆಯು ದರ್ಬೆ ಮುಖ್ಯ ರಸ್ತೆಯಲ್ಲಿರುವ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಮಧ್ಯಾಹ್ನದ ವೇಳೆ ಬೆಂಕಿ ಆಕಸ್ಮಿಕ ಸಂಭವಿಸಿದೆ ಎನ್ನಲಾಗಿದ್ದು ತಕ್ಷಣ ಅಂಗಡಿಯ ಸಿಬ್ಬಂದಿ ಇದನ್ನು ಗಮನಿಸಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ತ್ವರಿತ ಕಾರ್ಯಾಚರಣೆ:

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿದ್ದು ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ದಟ್ಟ ಹೊಗೆ ಮತ್ತು ಕಿರಿದಾದ ಜಾಗದಿಂದಾಗಿ ಆರಂಭದಲ್ಲಿ ಕಾರ್ಯಾಚರಣೆಗೆ ಸವಾಲು ಎದುರಾಗಿತ್ತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ಟಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ನಷ್ಟದ ನಿಖರ ಮೌಲ್ಯ ಇನ್ನಷ್ಟೇ ತಿಳಿದುಬರಬೇಕಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts