ಅಪಘಾತ

ಟ್ರಕ್ಕಿಂಗ್ ವೇಳೆ ದಾರಿ ತಪ್ಪಿ ದಟ್ಟಾರಣ್ಯದಲ್ಲಿ ನಾಪತ್ತೆಯಾದ 10 ಮೆಡಿಕಲ್ ವಿದ್ಯಾರ್ಥಿಗಳ ಪತ್ತೆ!!

ಟ್ರಕ್ಕಿಂಗ್‌ಗೆ ಹೊರಟಿದ್ದ 11 ವಿದ್ಯಾರ್ಥಿಗಳು ಕಾಡಿನಲ್ಲಿ ದಾರಿ ತಪ್ಪಿ ಮಧ್ಯರಾತ್ರಿವರೆಗೂ ಪರದಾಡಿರುವ ಘಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು: ಟ್ರಕ್ಕಿಂಗ್‌ಗೆ ಹೊರಟಿದ್ದ 11 ವಿದ್ಯಾರ್ಥಿಗಳು ಕಾಡಿನಲ್ಲಿ ದಾರಿ ತಪ್ಪಿ ಮಧ್ಯರಾತ್ರಿವರೆಗೂ ಪರದಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗ ಪ್ರವಾಸಿ ತಾಣದಲ್ಲಿ ನಡೆದಿದೆ.

akshaya college

ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ ಐವರು ಹುಡುಗರು ಮತ್ತು ಐವರು ಹುಡುಗಿಯರು ಹಾಗೂ ಡ್ರೈವರ್ ಸೇರಿ 11 ಜನ ಚಾರಣಕ್ಕೆ ಹೊರಟಿದ್ದರು. ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾದಲ್ಲಿ ಟಿಕೆಟ್ ಬುಕ್ ಮಾಡಿಸಿ ದಾರಿ ತಿಳಿಯದೆ ಮಂಗಳೂರಿನ ಬಂಡಾಜೆ ಮಾರ್ಗವಾಗಿ ಹತ್ತಿದ್ದರು. ಕಾಡಿನಲ್ಲಿ ದಾರಿ ತಪ್ಪಿ ಇಡೀ ಕಾಡು ಸುತ್ತಿ ವಿದ್ಯಾರ್ಥಿಗಳು ನಿತ್ರಾಣಗೊಂಡಿದ್ದರು.

ವಿಷಯ ತಿಳಿದ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಸಂಜೆಯಿಂದ ಮಧ್ಯರಾತ್ರಿ 2 ಗಂಟೆವರೆಗೂ ಕಾಡಿನಲ್ಲಿ 11 ಮಂದಿಗಾಗಿ ಹುಡುಕಾಟ ನಡೆಸಿದ್ದಾರೆ.

ಬಾಳೂರು ಪೊಲೀಸರ ಜೊತೆ ಮೂಡಿಗೆರೆ ಸ್ಥಳೀಯ ಯುವಕರು ಹುಡುಕಾಟಕ್ಕೆ ಕೈ ಜೋಡಿಸಿದ್ದರು. ನಿರಂತರ 6 ಗಂಟೆಗಳ ಹುಡುಕಾಟದ ಬಳಿಕ ಮಧ್ಯರಾತ್ರಿ 2 ಗಂಟೆಗೆ ಡ್ರೈವರ್ ಸೇರಿ 11 ಜನ ಸುರಕ್ಷಿತವಾಗಿ ಸಿಕ್ಕಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts