ಅಪಘಾತ

ಬೆಳ್ತಂಗಡಿಯಲ್ಲಿ ಕಾಡಾನೆ ದಾಳಿ; ರಿಕ್ಷಾ ಚಾಲಕ ಜಸ್ಟ್ ಮಿಸ್, ರಿಕ್ಷಾ ನಜ್ಜುಗುಜ್ಜು!!

ಕಾಡಾನೆ ದಾಳಿಯಿಂದ ಆಟೋ ರಿಕ್ಷಾವೊಂದು ನಜ್ಜುಗುಜ್ಜಾದ ಘಟನೆ ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ಇಂದು( ಜೂ.6) ಶುಕ್ರವಾರ ಮುಂಜಾನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ಕಾಡಾನೆ ದಾಳಿಯಿಂದ ಆಟೋ ರಿಕ್ಷಾವೊಂದು ನಜ್ಜುಗುಜ್ಜಾದ ಘಟನೆ ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ಇಂದು( ಜೂ.6) ಶುಕ್ರವಾರ ಮುಂಜಾನೆ ನಡೆದಿದೆ.

akshaya college

ಬೊಳಿಯಾರು ನಿವಾಸಿ ದಿನೇಶ್ ಎಂಬವರು ತಮ್ಮ ಆಟೋರಿಕ್ಷಾದಲ್ಲಿ ಮುಂಜಾನೆ ತನ್ನ ಮನೆಯಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ವೇಳೆ ಮನೆಯ ಸಮೀಪವೇ ಕಾಡಾನೆಯೊಂದು ರಸ್ತೆ ಮಧ್ಯೆ ಎದುರಾಗಿದ್ದು, ದಿನೇಶ್ ಇದನ್ನು ಗಮನಿಸಿ ಆತಂಕಗೊಂಡು ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ.

ಈ ವೇಳೆ ಕಾಡಾನೆಯೊಂದು ರಿಕ್ಷಾದ ಮೇಲೆ ಎರಗಿ ರಿಕ್ಷಾವನ್ನು ನಜ್ಜುಗುಜ್ಜುಗೊಳಿಸಿ ಸಮೀಪದ ಚರಂಡಿಗೆ ತಳ್ಳಿ ಹಾಕಿದೆ.

ಬಳಿಕ ಕಾಡನೆಗಳು ಅರಣ್ಯದತ್ತ ಹೋಗಿದ್ದು, ರಿಕ್ಷಾದ ಸ್ಥಿತಿ ನೋಡಿ ಕುಸಿದು ಬಿದ್ದ ದಿನೇಶ್ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts