ಅಪಘಾತ

ಮಾಸ್ಕೋ ನಡು ಬೀದಿಯಲ್ಲಿ ಪುಟಿನ್ ಕಾರು ಸ್ಪೋಟ!!

ಪುಟಿನ್ ಅವರ ಅಧಿಕೃತ ಕಾರು' ಔರಸ್ ಸೆನಾಟ್ ಲಿಮೋಸಿನ್ ಸ್ಫೋಟಗೊಂಡು ಬೆಂಕಿಗಾಹುತಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

Russia: ರಷ್ಯಾ & ಉಕ್ರೇನ್ ಯುದ್ಧವು ನಡೆಯುತ್ತಿರುವ ಸಮಯದಲ್ಲಿ, ಪದೇ ಪದೇ ರಷ್ಯಾ ಅಧ್ಯಕ್ಷ ವ್ಹಾದಿಮಿರ್ ಪುಟಿನ್ ಅವರ ಜೀವಕ್ಕೆ ಕಂಟಕ ಎದುರಾಗುತ್ತಿದೆ. ಇದೀಗ ಪುಟಿನ್ ಅವರ ಅಧಿಕೃತ ಕಾರು’ ಔರಸ್ ಸೆನಾಟ್ ಲಿಮೋಸಿನ್ ಸ್ಫೋಟಗೊಂಡು ಬೆಂಕಿಗಾಹುತಿಯಾಗಿದೆ. ಈ ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

akshaya college

ಯುರೋ ವೀಕ್ಲಿ ಪ್ರಕಾರ, ಲುಬಿಯಾಂಕದಲ್ಲಿರುವ ಮಾಸ್ಕೋದ ಎಫ್ ಎಸ್ ಬಿ ರಹಸ್ಯ ಸೇವೆಯ ಪ್ರಧಾನ ಕಚೇರಿ ಬಳಿ ಮಾರ್ಚ್ 29 ರಂದು ರಷ್ಯಾ ಅಧ್ಯಕ್ಷರ ಕಾರು ಸ್ಫೋಟ ಸಂಭವಿಸಿದೆ. ಆದರೆ ಸ್ಫೋಟಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಸಾವುಗಳ ಕುರಿತ ವರದಿಯಾಗಿಲ್ಲ.

ಅಂದಹಾಗೆ ಈಗ ಸ್ಫೋಟಗೊಂಡಿರುವ ಬ್ಲಾಡಿಮಿ‌ರ್ ಪುಟಿನ್ ಅವರ ಅಧಿಕೃತ ಕಾರು ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಮಾರ್ಚ್ 29 ರಂದು ಈ ರೀತಿ ರಷ್ಯಾ ಅಧ್ಯಕ್ಷರ ಕಾರು ಸ್ಫೋಟವಾಗಿದ್ದು, ದಿಢೀ‌ರ್ ಈ ರೀತಿ ಕಾರು ಸ್ಫೋಟಕ್ಕೆ ಕಾರಣ ಏನು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿ ಹಲ್‌ಚಲ್ ಎಬ್ಬಿಸಿದೆ. ಈ ನಡುವೆ ರಷ್ಯಾ ಅಧ್ಯಕ್ಷರ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ.

ವೈರಲ್ ವೀಡಿಯೊದಲ್ಲಿ ಘಟನೆ ನಡೆದ ಸ್ಥಳದಲ್ಲಿದ್ದ ಸಂಸ್ಥೆಗಳ ಕಾರ್ಮಿಕರು ಬೆಂಕಿಯನ್ನು ನಂದಿಸಲು ಸಹಾಯ ಮಾಡುತ್ತಿರುವುದನ್ನು ಕಾಣುತ್ತಿವೆ. ಬೆಂಕಿ ಕಾರಿನ ಇಂಜಿನ್ ಬೇ ಪ್ರದೇಶದಿಂದ ಪ್ರಾರಂಭವಾಗಿ ಅದರ ಒಳಭಾಗಕ್ಕೆ ವ್ಯಾಪಿಸಿದೆ ಎನ್ನಲಾಗಿದೆ. ವಾಹನದಿಂದ ದಟ್ಟವಾದ ಹೊಗೆ ಬರುತ್ತಿರುವುದು ಕಂಡುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts