Gl jewellers
ಅಪರಾಧ

ಅಕ್ರಮ ಚಿನ್ನ ಸಾಗಣೆ: ನಟಿ ರನ್ಯಾ ರಾವ್ ಬಂಧನ!

ಅಕ್ರಮವಾಗಿ ಚಿನ್ನ ಸಾಗಣೆ ಮಾಡಿದ ಆರೋಪದ ಮೇಲೆ ಕನ್ನಡದ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಣೆ ಮಾಡಿದ ಆರೋಪದ ಮೇಲೆ ಕನ್ನಡದ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.ಅವರನ್ನು ವಶಕ್ಕೆ ಪಡೆದ ಡಿಆರ್‌ಐ ತಂಡ ತೀವ್ರ ವಿಚಾರಣೆಗೊಳಪಡಿಸಿದೆ. ಅವರು ಸುದೀಪ್ ನಟನೆಯ ‘ಮಾಣಿಕ್ಯ’ ಸಿನಿಮಾದಲ್ಲಿ ನಟಿಸಿದ್ದರು.

Papemajalu garady
Karnapady garady

ನಟಿ ರನ್ಯಾ ರಾವ್ ಡಿಜಿಪಿ ರಾಮಚಂದ್ರ ರಾವ್ ಸಂಬಂಧಿಯಾಗಿದ್ದಾರೆ. ರನ್ಯಾ ದುಬೈನಿಂದ ಬೆಂಗಳೂರಿಗೆ ಮಾರ್ಚ್ 3ರ ರಾತ್ರಿ ಮರಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಏರ್ಪೋಟ್್ರ ಕಸ್ಟಮ್ಸ್ ಡಿಆರ್‌ಐ ಅಧಿಕಾರಿಗಳು ರನ್ಯಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ ಆರೋಪ ರನ್ಯಾ ಮೇಲೆ 2໖.

1991ರಲ್ಲಿ ಜನಿಸಿದ ರನ್ಯಾ ರಾವ್ ಅವರು ಮೂಲತಃ ಚಿಕ್ಕಮಗಳೂರಿನವರು. ನಟನಾ ವೃತ್ತಿ ಆರಂಭಿಸಲು ಬೆಂಗಳೂರಿಗೆ ಬಂದರು. 2014ರಲ್ಲಿ ಸುದೀಪ್ ನಟನೆಯ ‘ಮಾಣಿಕ್ಯ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರದಲ್ಲಿ ಮಾನಸಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡರು. 2016ರಲ್ಲಿ ತಮಿಳಿನ ಸಿನಿಮಾ ಒಂದನ್ನು ಮಾಡಿದರು. ಆದರೆ, ಇದು ಅಷ್ಟಾಗಿ ಗೆಲುವು ತಂದುಕೊಡಲಿಲ್ಲ.

2017ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಪಟಾಕಿ’ ಸಿನಿಮಾದಲ್ಲಿ ಸಂಗೀತಾ ಹೆಸರಿನ ಪಾತ್ರ ಮಾಡಿದರು. ಆ ಬಳಿಕ ಅವರಿಗೆ ಅಷ್ಟಾಗಿ ಆಫರ್ ಗಳು ಬರಲೇ ಇಲ್ಲ. ಆ ಬಳಿಕ ಅವರು ಸಿನಿಮಾ ಮಾಡಿಲ್ಲ. ಈಗ ಅವರು ಅಕ್ರಮ ಚಿನ್ನ ಸಾಗಣೆ ಮಾಡಿದ ಆರೋಪದಲ್ಲಿ ಸುದ್ದಿಯಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ತಾಯಿ‌ ಶವದ ಮುಂದೆ ದುಡ್ಡಿಗಾಗಿ ಕಿತ್ತಾಡಿಕೊಂಡ ಮಕ್ಕಳು! ರಾತ್ರಿ ಪೂರ್ತಿ ಠಾಣೆ ಮುಂಭಾಗವೇ ಶವವಿಟ್ಟ ಅಮಾನವೀಯ ಘಟನೆ!!

ಹಣಕ್ಕಾಗಿ ತಾಯಿಯ ಶವ ಹೂಳಲು ಅವಕಾಶ ನೀಡದಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದ ದೊಡ್ಡಕುರುಗೂಡು…