ಮಂಬೈ: ವ್ಯಕ್ತಿಯೋರ್ವ ತನ್ನ ಅತ್ತೆಯನ್ನು ಟೆಂಪೋದ ಒಳಗೆ ಬೆಂಕಿ ಹಚ್ಚಿ ಹತ್ಯೆಗೈದಿದ್ದಾನೆ. ಈ ಸಂದರ್ಭ ಟೆಂಪೋದಿಂದ ಹೊರ ಬರಲಾಗದೆ ಉಂಟಾದ ಗಂಭೀರ ಗಾಯಗಳಿಂದ ಆತ ಕೂಡ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಹತ್ಯೆಗೀಡಾದ ಮಹಿಳೆಯನ್ನು ದಾಬಿ ದಾಜಿ ಉಸಾರೆ (72) ಹಾಗೂ ಬೆಂಕಿಯಿಂದ ಗಂಭೀರ ಗಾಯಗೊಂಡು ಸಾವಿಗೀಡಾದ ವ್ಯಕ್ತಿಯನ್ನು ಕೃಷ್ಣ ದಾಜಿ ಅಸ್ಲಂರ್ಕ ಎಂದು ಗುರುತಿಸಲಾಗಿದೆ.
ಮುಲುಂದ್ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಈ ಘಟನೆಗೆ ಸಂಬಂಧಿಸಿ ಮೃತಪಟ್ಟ ಕೃಷ್ಣ ದಾಜಿ ಅಸ್ಲಂರ್ಕ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ನವರ್ಗ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಟೆಂಪೋ ಚಾಲಕನಾಗಿದ್ದ ಅಸ್ಥಂಕರ್ ಪತ್ನಿ ಬೋರಿವಾಲಿಯಲ್ಲಿ ರೋಗಿಯ ಆರೈಕೆಯ ಕೆಲಸ ಮಾಡಲು ಆರು ತಿಂಗಳ ಹಿಂದೆ ಆತನನ್ನು ತ್ಯಜಿಸಿ ಹೋಗಿದ್ದಳು. ಆತನ ಪುತ್ರ ಹಾಗೂ ವಿವಾಹಿತ ಪುತ್ರಿ ಬೇರೆ ಕಡೆ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪಾನದ ಚಟ ಅಂಟಿಸಿಕೊಂಡಿದ್ದ ಅಸ್ಥಂಕರ್ ತನ್ನನ್ನು ಪತ್ನಿ ತ್ಯಜಿಸಿರುವುದಕ್ಕೆ ಆಕ್ರೋಶಿತನಾಗಿದ್ದ. ಅಲ್ಲದೆ, ತನ್ನನ್ನು ಪತ್ನಿ ತ್ಯಜಿಸಲು ಅತ್ತೆ ನೀಡಿದ ಉತ್ತೇಜನವೇ ಕಾರಣ ಎಂದು ಶಂಕಿಸಿದ್ದ ಎಂದು ಅವರು ಹೇಳಿದ್ದಾರೆ.
“ಆತ ತನ್ನ ತಾಯಿಯ ಕಣ್ಣಿನ ಶಸ್ತ್ರಚಿಕಿತ್ಸೆಗೆ ಎಂದು ಸೋಮವಾರ ಟೆಂಪೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅನಂತರ ಆಕೆಗೆ ಟೆಂಪೋದಲ್ಲಿ ಬೆಂಕಿ ಹಚ್ಚಿದ್ದಾನೆ” ಎಂದು ಬಾಬಿ ದಾಜಿ ಉಸಾರೆಯ ಪುತ್ರ ತಿಳಿಸಿದ್ದಾನೆ.
ಟೆಂಪೊ ಹತ್ತಿ ಉರಿಯುತ್ತಿರುವ ಕುರಿತು ಪಾದಚಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಅಗ್ನಿ ಶಾಮಕ ದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಟೆಂಪೊದ ಬಾಗಿಲು ಒಡೆದು ಇಬ್ಬರನ್ನು ಹೊರಗೆ ತೆಗೆದರು ಹಾಗೂ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರಿಬ್ಬರು ಅದಾಗಲೇ ತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ