ಬೆಂಗಳೂರಿನಲ್ಲಿ ಎಟಿಎಂ ದರೋಡೆ , ಗ್ಯಾಸ್ ಕಟರ್ ಬಳಸಿ ಖದೀಮರು ಎಟಿಎಂನಲ್ಲಿದ್ದ ಹಣ ಕದ್ದೊಯ್ದ ಘಟನೆ ಸೂಲಿಬೆಲೆಯ ದೇವನಹಳ್ಳಿ ಕ್ರಾಸ್ನಲ್ಲಿ ನಡೆದಿದೆ.
ಸ್ಟೇಟ್ಸ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂನಲ್ಲಿ ಕಳ್ಳತನ ನಡೆದಿದೆ. ಎಟಿಎಂನ ಶೆಟರ್’ ನ ಗ್ಯಾಸ್ ಕಟರ್ ಬಳಸಿ ಕತ್ತರಿಸಿದ ದುಷ್ಕರ್ಮಿಗಳು ಒಳಗೆ ನುಗ್ಗಿ ಎಟಿಎಂನಲ್ಲಿ 30 ಲಕ್ಷ ರೂ.ಗೂ ಹೆಚ್ಚು ಹಣ ದೋಚಿದ್ದಾರೆ.
ಕಾರಿನಿಂದಲೇ ಗ್ಯಾಸ್ ಕಟರ್ ಬಳಸಿ ಶೆಟರ್ ಕತ್ತರಿಸಲಾಗಿದೆ. ಎಟಿಎಂ ದರೋಡೆ ನಂತರ ಹೊಸಕೋಟೆ ಮಾರ್ಗದಲ್ಲಿ ದುಷ್ಕರ್ಮಿಗಳು ಎಸ್ಕೆಪ್ ಆಗಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.