Gl harusha
ಅಪರಾಧ

ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ತೋಟದಲ್ಲಿ ಕೋಲು ಬಳಸಿ ಸೀಯಾಳ ಕೀಳುತ್ತಿರುವಾಗ ಅಲ್ಯೂಮಿನಿಯಂ ಕೋಲಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕುವೆಚ್ಚಾರ್ ಎಂಬಲ್ಲಿ ತೋಟದಲ್ಲಿ ಕೋಲು ಬಳಸಿ ಸೀಯಾಳ ಕೀಳುತ್ತಿರುವಾಗ ಅಲ್ಯೂಮಿನಿಯಂ ಕೋಲಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಮೃತಪಟ್ಟ ಘಟನೆ ಬುಧವಾರ ನಡೆದಿದೆ.

Muliya
srk ladders
Pashupathi

ಮೃತ ಕಾರ್ಮಿಕ ದಾವಣಗೆರೆ ಮೂಲದ ವೀರಭದ್ರ (29) ಎಂದು ತಿಳಿದು ಬಂದಿದೆ.

ತೋಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಹೊಟ್ಟೆ ನೋವು ನಿವಾರಣೆಗೆಂದು ತೆಂಗಿನ ಮರದಿಂದ ಸೀಯಾಳವೊಂದನ್ನು ಕೀಳಲೆಂದು ಕೋಲು ಬಳಸಲು ಮುಂದಾದಾಗ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಕೋಲಿಗೆ ಸ್ಪರ್ಶವಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದರು ಎನ್ನಲಾಗಿದೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮಂಗಳೂರು – ಉಳ್ಳಾಲ ಬಸ್’ನಲ್ಲಿ ಯುವತಿಯ ಮುಟ್ಟಿ ವಿಕೃತಿ! ಬಸ್ ನಿರ್ವಾಹಕನ ಅಮಾನತುಗೊಳಿಸಿದ KSRTC ಡಿಸಿ!

ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನೊಬ್ಬನ ವಿರುದ್ಧ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣ ದಾಖಲಾದ…