ವಿಟ್ಲ : ಮಣಿಪಾಲದ ಆರ್ವಿ ಟೂರ್ಸ್ ಎಂಡ್ ಟ್ರಾವೆಲ್ಸ್ ಮಾಲಕ ಪರ್ಕಳ ಸಮೀಪದ ಅಚ್ಚುತನಗರ ಗ್ಯಾಡ್ಸನ್ ನಿವಾಸಿ ಕರಿಂಕ ರಾಘವೇಂದ್ರ ಭಂಡಾರಿ (44 ವ.) ಹೃದಯಾಘಾತಗೊಂಡು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಫೆಬ್ರವರಿ 19 ರಂದು ಸಾವನ್ನಪ್ಪಿದ್ದಾರೆ.
ಬಂಟ್ವಾಳದ ವಿಟ್ಲ ಕರಿಂಕ ಮಾಜಿ ಸೈನಿಕ ಕೆ.ಎನ್. ಶಾಂಭ ಭಂಡಾರಿಯವರ ಪುತ್ರರಲ್ಲಿ ಒಬ್ಬನಾದ ಇವರು ಕಳೆದ 15 ವರ್ಷಗಳಿಂದ ಮಣಿಪಾಲದಲ್ಲಿ ಟ್ರಾವೆಲ್ಸ್ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದರು.
ಪೂವರಿ ಪತ್ರಿಕೆಯ ಪ್ರಥಮ ಖರೀಧಿದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಾಘವೇಂದ್ರ ಭಂಡಾರಿಯವರು ತಾಯಿ ಕೆ. ಸರೋಜ ಎಸ್. ಭಂಡಾರಿ, ಪತ್ನಿ ಶ್ರೀಮತಿ ಅಕ್ಷತಾ, ಮಗಳು ಕು. ಆರ್ವಿ, ಸಹೋದರಿಯರು, ಸಹೋದರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.