ಪುತ್ತೂರು: ಪುತ್ತೂರು ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಸವಣೂರು ಗ್ರಾಮದ ಮೆದು ಕುರುವೈಲು ನಿವಾಸಿ ಕೆ.ಶಂಕರ್ ನ್ಯಾಕ್ (85ವ) ರವರು ಫೆ.16ರಂದು ರಾತ್ರಿ ನಿಧನರಾದರು.
ಕೆ.ಶಂಕರ್ ನ್ಯಾಕ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ರಾತ್ರಿ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು ಎಂದು ವರದಿಯಾಗಿದೆ.
ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಯಾಗಿದ್ದ ಅವರು ಪುತ್ತೂರಿನಲ್ಲಿ ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಮುಖ್ಯಪ್ರವರ್ತಕರಾಗಿದ್ದರು. ಪುತ್ತೂರು ಆದರ್ಶ ವಿವಿದ್ದೋದ್ದೇಶ ಸಹಕಾರಿ ಸಂಘ ಮತ್ತು ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದರು.
ಮೃತರು ಪತ್ನಿ ಸರೋಜ, ಪುತ್ರ ಪಿಡಬ್ಲ್ಯುಡಿ ಕ್ಲಾಸ್ 1 ಗುತ್ತಿಗೆದಾರ ಗಿರೀಶ್ ಕೆ.ಎಸ್, ಪುತ್ರಿ ಸವಿತಾ ಕೆ.ಎಸ್ ಅವರನ್ನು ಅಗಲಿದ್ದಾರೆ.