ಬೆಂಗಳೂರಿನ ಟ್ರಾಫಿಕ್ ಎಷ್ಟು ಜಾಗರೂಕರಾದರೂ ಅಲ್ಲಿನ ಟ್ರಾಫಿಕ್, ಕೊಂಚ ಕಣ್ಣು ಆಚೆ ಈಚೆ ನೋಡಿದರೂ ಅಕ್ಕಪಕ್ಕದ ವಾಹನಗಳಿಗೆ ಗುದ್ದುವುದು ಗ್ಯಾರಂಟಿ, ಈ ನಡುವೆ ಮಹಿಳೆಯೊಬ್ಬರು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಾ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ಮಹಿಳೆ ಕಾರು ಚಲಾಯಿಸುವ ವೇಳೆ ಸ್ಟೇರಿಂಗ್ ಮೇಲೆ ಲ್ಯಾಪ್ ಟಾಪ್ ಇಟ್ಟು ಕೆಲಸ ಮಾಡುತ್ತಾ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುವುದು ಕಾಣಿಸಿ ಕೊಂಡಿದೆ.ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಮಹಿಳೆಯ ವಿಳಾಸ ಪತ್ತೆ ಹಚ್ಚಿದ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಸವಾರಿ ಮಾಡಿದ್ದಕ್ಕೆ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಸಂಚಾರ, ಉತ್ತರ ವಿಭಾಗ) ಸಾಮಾಜಿಕ ಜಾಲತಾಣ ‘X’ ನಲ್ಲಿ ಮಹಿಳೆಯ ವಿಡಿಯೋ ಶೇರ್ ಮಾಡಿ ಮನೆಯಿಂದಲೇ ಕೆಲಸ ಮಾಡಿ, ಕಾರು ಚಾಲನೆ ಮಾಡುವಾಗ ಅಲ್ಲ’ ಎಂದು ಬರೆದುಕೊಂಡಿದ್ದಾರೆ