Gl jewellers
ಅಪರಾಧ

ಸಂಚಾರ ನಿಯಮ ಉಲ್ಲಂಘಿಸಿದ ಸ್ಕೂಟರಿಗೆ ಬರೋಬ್ಬರಿ 1.61 ಲಕ್ಷ ರೂ. ದಂಡ!

Karpady sri subhramanya
ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ ದ್ವಿಚಕ್ರ ವಾಹನ ಸವಾರನಿಗೆ ಬರೋಬ್ಬರಿ 1.61 ಲಕ್ಷ ರೂ. ದಂಡ ವಿಧಿಸಿದ್ದು, ದಂಡದ ಮೊತ್ತವು ಆತನ ವಾಹನದ ಬೆಲೆಗಿಂತಲೂ ಅಧಿಕವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

ಬೆಂಗಳೂರು:  ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದ್ವಿಚಕ್ರ ವಾಹನ ಸವಾರನಿಗೆ ಬರೋಬ್ಬರಿ 1.61 ಲಕ್ಷ ರೂ. ದಂಡ ವಿಧಿಸಿದ್ದು, ದಂಡದ ಮೊತ್ತವು ಆತನ ವಾಹನದ ಬೆಲೆಗಿಂತಲೂ ಅಧಿಕವಾಗಿದೆ.

ಪೊಲೀಸರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಕೆಲ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವುದು ಸಾಮಾನ್ಯವಾಗಿದೆ. ಅಂತಹವರ ವಿರುದ್ಧ ಸಂಚಾರ ಪೊಲೀಸರು, ಸಿಗ್ನಲ್ ಬಳಿ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿಯೇ ದಂಡ ವಿಧಿಸುತ್ತಿದ್ದಾರೆ. ಆದರೆ, ನಗರದಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. 2023 ಮಾರ್ಚ್ ಇದುವರೆಗೂ 311 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾನೆ.

Sampya jathre

1.61 2ಲಕ್ಷ ದಂಡ:  ಕೆ ಎ,05 ಜೆಎಕ್ಸ್, -1344 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಸವಾರ ಪೊಲೀಸರ ದಂಡಾಸ್ತ್ರಕ್ಕೂ ಜಗ್ಗದೆ ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. ಹೆಲ್ಮಟ್ ಧರಿಸದಿರುವುದು

ಪೊಲೀಸರ ದಂಡಾಸ್ತ್ರಕ್ಕೂ ಜಗ್ಗದೆ ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. ಹೆಲ್ಮಟ್ ಧರಿಸದಿರುವುದು, ಸಿಗ್ನಲ್ ಜಂಪ್, ಏಕಮುಖ ಚಾಲನೆ, ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ ಸೇರಿ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಹೀಗಾಗಿ ಆತನಿಗೆ 1.61 ಲಕ್ಷ ರೂ. ದಂಡ ವಿಧಿಸಿದ್ದಾರೆ. ಕಳೆದ ವರ್ಷ 1,05,500 ರೂ.ಇದ್ದ ದಂಡದ ಮೊತ್ತ ಈ ವರ್ಷ 1,61,500 ರೂ.ಗೆ ಏರಿಕೆಯಾಗಿದೆ. ಈ ಬಗ್ಗೆ ಆತನಿಗೆ ಹಲವು ಬಾರಿ ನೋಟಿಸ್ ಕೂಡ ನೀಡಲಾಗಿದೆ. ಆದರೂ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. ಈ ದಂಡದ ಮೊತ್ತವು ಆತನ ದ್ವಿಚಕ್ರ ವಾಹನದ ಮೌಲ್ಯಕ್ಕಿಂತಲೂ ಹೆಚ್ಚಿದ್ದು, ಸಂಚಾರ ಪೊಲೀಸರು ಆ ಸವಾರನ ವಿರುದ್ಧ ಇನ್ನೂ ಯಾಕೆ ಕಠಿಣ ಕ್ರಮ ಕೈಗೊಂಡಿಲ್ಲ. ಆರ್‌ಟಿಒ ಅಧಿಕಾರಿಗಳು ಏಕೆ ಆತನ ವಾಹನ ಜಪ್ತಿ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆತನ ವಾಹನ ಸಂಖ್ಯೆ ಸಮೇತ ಪ್ರಕಟಿಸಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಲಿಕ ಪತ್ತೆ, ದ್ವಿ ಚಕ್ರ ವಾಹನ ಜಪ್ತಿ : ದ್ವಿಚಕ್ರ ವಾಹನದ

ಮೇಲೆ 311ಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಪ್ರಕರಣ ಮತ್ತು 1.6 ಲಕ್ಷ ರೂ. ದಂಡ ಬಾಕಿ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಎಚ್ಚೆತ್ತುಕೊಂಡ ನಗರ ಸಂಚಾರ ಪೊಲೀಸರು ದ್ವಿಚಕ್ರ ವಾಹನದ ಮಾಲಿಕನನ್ನು ಪತ್ತೆ ಹಚ್ಚಿ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ವಾಹನವು ಕಲಾಸಿಪಾಳ್ಯದಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿರುವ ಪೆರಿಯಸ್ವಾಮಿ

ಎಂಬುವರಿಗೆ ಸೇರಿದ್ದಾಗಿದೆ. ಈ ಸ್ಕೂಟರ್ ಅನ್ನು ಪೆರಿಯಸ್ವಾಮಿ ಮತ್ತು ಸುದೀಪ್ ಎಂಬುವರು ಬಳಸುತ್ತಾರೆ. ಪೊಲೀಸರು ಕಲಾಸಿಪಾಳ್ಯದಲ್ಲಿ ಟ್ರಾವೆಲ್ಸ್ ಏಜೆನ್ಸಿಯ ಕಚೇರಿಗೆ ಹೋಗಿ ಮಾಲಿಕರಿಗೆ 1.6 ಲಕ್ಷ ರೂ. ದಂಡ ಪಾವತಿಸಲು ಸೂಚಿಸುತ್ತಿದಂತೆ ಅವರು ಶಾಕ್ ಆಗಿದ್ದಾರೆ.

ಕೂಡಲೇ ಸುದೀಪ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ವಿಚಾರಿಸಿದ್ದಾರೆ. ಬಳಿಕ ಮಾಲಿಕರು ಈಗ ಸ್ವಲ್ಪ ದಂಡ ಪಾವತಿಸುತ್ತೇವೆ. ಉಳಿದ ದಂಡವನ್ನು ನಂತರ ಪಾವತಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.

>

ಆದರೆ ಇದಕ್ಕೆ ಒಪ್ಪದ ಪೊಲೀಸರು ವಾಹನವನ್ನು ಜಪ್ತಿ ಮಾಡಿಕೊಂಡು ಹೋಗಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ನಿಲ್ಲಿದ್ದಾರೆ. ಒಂದು ವೇಳೆ ಮಾಲೀಕರು ದಂಡ ಪಾವತಿಸಲು ವಿಫಲರಾದರೆ ಅವರ ವಿರುದ್ದ ಮತ್ತೂಂದು ಪ್ರಕರಣ ದಾಖಲಿಸಿ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಲಾಗುವುದು. ನ್ಯಾಯಾಲಯ ಆತನ ವಿರುದ್ಧ ಕ್ರಮ ಜರುಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7 ದಿನದಲಿ 800 ಡ್ರಂಕ್ ಆ್ಯಂಡ್ ಡ್ರೈವ್ ಕೇಸ್:

ಬೆಂಗಳೂರು: ನಗರದಲ್ಲಿ ಕಳೆದ 7 ದಿನಗಳ ಕಾಲ ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು. ಮದ. ಸೇವಿಸಿ

ಆ್ಯಂಡ್ ಡ್ರೈವ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು, ಮದ್ಯ ಸೇವಿಸಿ ವಾಹನ ಚಲಾಯಿಸಿದ ಸವಾರರು/ಚಾಲಕರ ವಿರುದ್ಧ 800 ಪ್ರಕರಣ ದಾಖಲಿಸಿದ್ದಾ.ಸಂಚಾರ ಪೊಲೀಸರು ನಗರದ 50 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜ.27ರಿಂದ ಫೆ.2ರವರೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ವಿವಿಧ ಮಾದರಿಯ 62,300 ವಾಹನಗಳ ತಪಾಸಣೆ ನಡೆಸಿ, ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಚಾಲಕರು/ಸವಾರರ ವಿರುದ್ಧ 800 ಪ್ರಕರಣ ದಾಖಲಿಸಿದ್ದಾರೆ. ಓವರ್ ಸ್ಪೀಡ್ ವಿರುದ್ಧ 228 ಪ್ರಕರಣ: ಇದೇ ವೇಳೆ ಅತಿವೇಗದಿಂದ ವಾಹನ ಚಲಾಯಿಸಿದ ಸವಾರರು ವಿರುದ್ಧ 228 ಪ್ರಕರಣ ದಾಖಲಿಸಿ, 2.30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

ಈ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ಮುಂದುವರೆಯಲಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts