ಕೋಲ್ಕತ್ತಾ: ಮಹಿಳೆಯೊಬ್ಬಳು ತನ್ನ ಪತಿಗೆ ಮೋಸ ಮಾಡಿ ಪ್ರಿಯಕರನ ಜತೆ ಓಡಿ ಹೋಗಿರುವ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದಿದೆ.
ಹೌರಾ ಜಿಲ್ಲೆಯ ಸಂಕ್ರೈಲ್ ನಲ್ಲಿ ಪತಿ ಹಾಗೂ ಪುತ್ರಿಯ ಜತೆ ವಾಸಿಸುತ್ತಿದ್ದ ಮಹಿಳೆ ಆಗಾಗ ಪತಿಗೆ ತಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ ಹೇಳಿಕೊಳ್ಳುತ್ತಿದ್ದಳು. ಮಗಳ ಶಿಕ್ಷಣ ಮತ್ತು ಮದುವೆಗೆ ಹಣ ಉಳಿಸಬೇಕೆನ್ನುವ ನಿಟ್ಟಿನಲ್ಲಿ ಮಹಿಳೆ ಪತಿಗೆ ಅವರ ಕಿಡ್ನಿ ಮಾರಾಟ ಮಾಡಬೇಕೆಂದು ಹೇಳಿದ್ದಳು.
ಪತ್ನಿಯ ಮಾತಿಗೆ ಪತಿ ಒಪ್ಪಿಗೆ ಕೊಟ್ಟಿದ್ದರು. ಕಿಡ್ನಿ ಮಾರಾಟ ಮಾಡಿ ಅದರಿಂದ ಬರುವ ಹಣದಿಂದ ಮಗಳ ಶಿಕ್ಷಣ ಹಾಗೂ ಮದುವೆಗೆ ಸಹಾಯವಾಗುತ್ತದೆ ಎಂದು ಕಿಡ್ನಿ ಮಾರಾಟ ಮಾಡಲು ವ್ಯಕ್ತಿ ಒಪ್ಪಿಕೊಂಡಿದ್ದ.
10 ಲಕ್ಷ ರೂಪಾಯಿಗೆ ಕಿಡ್ನಿ ಖರೀದಿಸಲು ಒಬ್ಬರು ಮುಂದೆ ಬಂದಿದ್ದರು. ಕಿಡ್ನಿ ಮಾರಾಟ ಮಾಡಿದ ಬಳಿಕ ಆ ಹಣವನ್ನು ಬ್ಯಾಂಕ್‌ನಲ್ಲಿ ಜಮೆ ಮಾಡುವುದಾಗಿ ಪತ್ನಿ ಹೇಳಿದ್ದಳು.
ಪತಿಯ ಕಿಡ್ನಿ ಮಾರಾಟ ಮಾಡಿ, ಅದರಿಂದ ಬಂದ 10 ಲಕ್ಷ ರೂಪಾಯಿ ಜತೆಗೆ ಮಹಿಳೆ ಪರಾರಿ ಆಗಿದ್ದಾಳೆ. ರಾತ್ರೋರಾತ್ರಿ ಹಣ ಹಿಡಿದುಕೊಂಡು ಪ್ರಿಯಕರನ ಜತೆ ಮನೆಬಿಟ್ಟು ಹೋಗಿದ್ದಾಳೆ.
ಮಹಿಳೆ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ರವಿ ದಾಸ್ ಎನ್ನುವವನ ಜತೆ ಫೇಸ್ ಬುಕ್‌ನಲ್ಲಿ ಪರಿಚಯವಾಗಿ ಸಂಬಂಧದಲ್ಲಿದ್ದಳು. ಗಂಡನ ಕಿಡ್ನಿ ಮಾರಾಟ ಮಾಡಿ ಅದರಿಂದ ಬಂದ 10 ಲಕ್ಷ ರೂಪಾಯಿಗೆ ಜತೆ ಪರಾರಿ ಆಗಿದ್ದಾಳೆ.
ಗಂಡನನ್ನು ಕಿಡ್ನಿ ಮಾರಾಟ ಮಾಡುವಂತೆ ಒಪ್ಪಿಸಿ ಅದರಿಂದ ಬರುವ ಹಣದಿಂದ ಪರಾರಿ ಆಗುವ ಯೋಜನೆಯನ್ನು ಮಹಿಳೆ ಮೊದಲೇ ಹಾಕಿಕೊಂಡಿದ್ದಳು. ಆದರೆ ಗಂಡ ಪತ್ನಿಯ ಕುತಂತ್ರ ಬುದ್ದಿಯನ್ನು ಅರಿಯದೆ ಮೋಸ ಹೋಗಿದ್ದಾನೆ.
ಈ ಕುರಿತು ಮೋಸ ಹೋಗಿರುವ ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ಬಳಿ ಹೋಗಿ ಕೇಳಿದಾಗ, ಪಶ್ಚಾತ್ತಾಪ ಪಡುವ ಬದಲು ಗಂಡನಿಗೆ ಬೆದರಿಕೆ ಹಾಕಿದ್ದಾಳೆ ಎಂದು ವರದಿ ತಿಳಿಸಿದೆ.