Gl jewellers
ಅಪರಾಧ

ಚರ್ಚ್‌’ಗೆ ನುಗ್ಗಿದ ಕಳ್ಳ- ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ.!!

ಚರ್ಚ್ ಗೆ ನುಗ್ಗಿದ ಕಳ್ಳನೋರ್ವ ಪರಮಪ್ರಸಾದ ಇಡುವ ಪೆಟ್ಟಿಗೆಯನ್ನು ಒಡೆದು ಪರಮಪ್ರಸಾದ ಹಂಚುವ ವಸ್ತುಗಳನ್ನು ಹಾಗೂ ಕಾಣಿಕೆಗೆ ಹಾಕಿರುವ ಹಣವನ್ನು ಕಳವುಗೈದ ಘಟನೆ ನಡೆದಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು : ಚರ್ಚ್ ಗೆ ನುಗ್ಗಿದ ಕಳ್ಳನೋರ್ವ ಪರಮಪ್ರಸಾದ ಇಡುವ ಪೆಟ್ಟಿಗೆಯನ್ನು ಒಡೆದು ಪರಮಪ್ರಸಾದ ಹಂಚುವ ವಸ್ತುಗಳನ್ನು ಹಾಗೂ ಕಾಣಿಕೆಗೆ ಹಾಕಿರುವ ಹಣವನ್ನು ಕಳವುಗೈದ ಘಟನೆ ಮುಡಿಪುವಿನಲ್ಲಿರುವ ಸಂತ ಜೋಸೆಫ್ ವಾಝ್ ಚರ್ಚ್ಲ್ಲಿ ನಡೆದಿದೆ.

Papemajalu garady
Karnapady garady

ಜ.24ರಂದು ರಾತ್ರಿ ಕಳ್ಳ ಚರ್ಚ್ನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳ ತಲೆಗೆ ಬಟ್ಟೆ ಕಟ್ಟಿದ್ದರೆ, ಮುಖಕ್ಕೆ ಮಾಸ್ಕ್ ಧರಿಸಿದ್ದ. ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದ ಕೂಡಲೇ ಚರ್ಚ್ ನ ಪದಾಧಿಕಾರಿಗಳು ಪೊಲೀಸರ ಗಮನಕ್ಕೆ ತಂದಿದ್ದಾರೆ. ಕಳ್ಳತನದ ದೃಶ್ಯಾವಳಿ ಚರ್ಚಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪೊಲೀಸರರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಹಾಗೂ ಸಿಸಿಟಿವಿಯ ಫೂಟೆಜ್ ಆಧಾರದಲ್ಲಿ ಕಳ್ಳನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts