ಅಪರಾಧ

ಮಕ್ಕಳಾಗದ ಮಹಿಳೆಗೆ ಗರ್ಭ ಧರಿಸುವಂತೆ ಮಾಡುವ ಉದ್ಯೋಗ!! ಹೀಗೊಂದು ವಿಚಿತ್ರ ಉದ್ಯೋಗದ ಜಾಹೀರಾತು: ಬೆಂಬಿದ್ದ ಪೊಲೀಸರು ಮಾಡಿದ್ದೇನು ಗೊತ್ತೇ??

tv clinic
ಮಕ್ಕಳಾಗದ ಮಹಿಳೆ ಗರ್ಭ ಧರಿಸಿದ್ರೆ ಬರೋಬ್ಬರಿ 5 ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದು ಜಾಹೀರಾತು ಒಂದು ಸುದ್ದಿ ಮಾಡ್ತಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಕ್ಕಳಾಗದ ಮಹಿಳೆ ಗರ್ಭ ಧರಿಸಿದ್ರೆ ಬರೋಬ್ಬರಿ 5 ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದು ಜಾಹೀರಾತು ಒಂದು ಸುದ್ದಿ ಮಾಡ್ತಿದೆ.

core technologies

ಹೌದು, ಮಕ್ಕಳಾಗದ ಮಹಿಳೆಯನ್ನು ಪ್ರೆಗ್ನೆಂಟ್ ಮಾಡಿ, ಹಣ ಗಳಿಸಿ ಅನ್ನೋದು ಕೆಲಸದ ಟ್ಯಾಗ್ ಲೈನ್. ಬಿಹಾರದಲ್ಲಿ ಮಹಿಳೆಯನ್ನು ಪ್ರೆಗ್ನೆಂಟ್ ಮಾಡುವ ಕೆಲಸಕ್ಕೆ ಜನರನ್ನು ನೇಮಕ ಮಾಡಿಕೊಳ್ಳಲಾಗ್ತಿದೆ. ಕೆಲಸ ಸಕ್ಸಸ್ ಆಗಿ, ಗರ್ಭ ಧರಿಸಿದ್ರೆ ಉದ್ಯೋಗಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 5 ಲಕ್ಷ ರೂಪಾಯಿ ನೀಡಲಾಗುತ್ತದೆ.

akshaya college

ಒಂದ್ವೇಳೆ ಮಹಿಳೆ ಮಕ್ಕಳನ್ನು ಪಡೆಯಲು ವಿಫಲವಾದ್ರೂ ಉದ್ಯೋಗಿಗೆ ನಷ್ಟವಿಲ್ಲ. ಆತನಿಗೆ ಕಂಪನಿ 50 ಸಾವಿರ ನೀಡುತ್ತೆ.

ಈ ಆಫ‌ರ್ ನೋಡ್ತಿದ್ದಂತೆ ಜನರು ಫೋನ್ ಕರೆ ಮಾಡಲು ಶುರು ಮಾಡಿದ್ದಾರೆ. ಆದ್ರೆ ಈ ಕೆಲಸಕ್ಕೆ ಸೇರ್ಬೇಕು ಅಂದ್ರೆ ಮೊದಲು ಅರ್ಜಿ ಭರ್ತಿ ಮಾಡೋಕು. ಫಾರ್ಮ್ ಭರ್ತಿಗೆ ಕಂಪನಿ ಹಣ ಪಡೆದಿದೆ. ನಂತ್ರ ಕಾಲ್ ಬ್ಲಾಕ್ ಮಾಡಿದೆ. ಅನೇಕ ಜನರು ಇವರ ಮೋಸದ ಜಾಲಕ್ಕೆ ಬಿದ್ದಿದ್ದಾರೆ. ಕೆಲವರು ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ದೂರಿನ ಮೇರೆಗೆ ವಿಚಾರಣೆ ಕೈಗೊಂಡ ಪೊಲೀಸ್ ಕೈಗೆ ಖದೀಮರು ಸಿಕ್ಕಿ ಬಿದ್ದಿದ್ದಾರೆ. ಸದ್ಯ ಬಿಹಾರದ ಹಳ್ಳಿಯಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಆರೋಪಿಗಳಿಂದ ಆರು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts