ಅಪರಾಧ

ಇಬ್ಬರು ಮಕ್ಕಳನ್ನು ಸಾಯಿಸಿ ದಂಪತಿ ಆತ್ಮಹತ್ಯೆ!!

ಇಬ್ಬರು ಪುಟಾಣಿ ಮಕ್ಕಳನ್ನು ವಿಷವುಣಿಸಿ ಕೊಲೆಗೈದು ತಂದೆತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸದಾಶಿವ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಆ‌ರ್.ಎಂ.ವಿ. ಎಕ್ಸ್ ಟೆನ್ಸನ್ ನಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಇಬ್ಬರು ಪುಟಾಣಿ ಮಕ್ಕಳನ್ನು ವಿಷವುಣಿಸಿ

akshaya college

ಕೊಲೆಗೈದು ತಂದೆತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸದಾಶಿವ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಆ‌ರ್.ಎಂ.ವಿ. ಎಕ್ಸ್ ಟೆನ್ಸನ್ ನಲ್ಲಿ ನಡೆದಿದೆ.

ಅನೂಪ್‌, ಅವರ ಪತ್ನಿ ರಾಖಿ ಮತ್ತು ಐದು ಮತ್ತು ಒಂದೂವರೆ ವರ್ಷದ ಇಬ್ಬರು ಮಕ್ಕಳು ಮೃತಪಟ್ಟವರು.

ಮಕ್ಕಳಿಬ್ಬರಿಗೆ ವಿಷವುಣಿಸಿ ಬಳಿಕ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆನ್ ಲೈನ್ ವ್ಯವಹಾರ ಮಾಡುತ್ತಿದ್ದ ಅನೂಪ್ ಇತ್ತೀಚೆಗೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆನ್ನಲಾಗಿದೆ. ಇದಲ್ಲದೆ ಇವರ ಐದು ವರ್ಷದ ಮಗುವಿಗೆ ವಿಶೇಷ ಚೇತನವಾಗಿತ್ತು ಎಂದು ತಿಳಿದುಬಂದಿದೆ.

ಇವೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts