ಅಪರಾಧ

ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

ಸತ್ತ ವ್ಯಕ್ತಿಯೊಬ್ಬರ ಮೃತ ದೇಹವನ್ನು ಆಂಬುಲೆನ್ಸ್ ಮೂಲಕ ಮನೆಗೆ ತರುವ ವೇಳೆ ಬದುಕುಳಿದ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಹಾರಾಷ್ಟ್ರ: ಸತ್ತ ವ್ಯಕ್ತಿಯೊಬ್ಬರ ಮೃತ ದೇಹವನ್ನು ಆಂಬುಲೆನ್ಸ್ ಮೂಲಕ ಮನೆಗೆ ತರುವ ವೇಳೆ ಬದುಕುಳಿದ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳಕಿಗೆ ಬಂದಿದೆ.

akshaya college

ಕಸಬಾ-ಬಾವಾಡದ ನಿವಾಸಿಯಾಗಿರುವ ಪಾಂಡುರಂಗ ಉಲ್ಪೆ (65) ಮರುಜನ್ಮ ಪಡೆದ ವ್ಯಕ್ತಿ.

ಪಾಂಡುರಂಗ ಅವರಿಗೆ ಕಳೆದ ಡಿಸೆಂಬರ್ 16 ರಂದು ಮನೆಯಲ್ಲಿದ್ದ ವೇಳೆ ಹೃದಯಾಘಾತವಾಗಿತ್ತು ಕೂಡಲೇ ಅವರ ಮನೆಯವರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಪಾಂಡುರಂಗ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ, ಇನ್ನು ಅಂತ್ಯಕ್ರಿಯೆ ಮಾಡುವ ಉದ್ದೇಶದಿಂದ ಆಸ್ಪತ್ರೆಯ ಪ್ರಕ್ರಿಯೆ ಮುಗಿಸಿ ಆಂಬುಲೆನ್ಸ್ ಮೂಲಕ ತಮ್ಮ ಊರಿಗೆ ಮೃತದೇಹವನ್ನು ತರಲಾಗುತ್ತಿತ್ತು ಈ ವೇಳೆ ಆಂಬುಲೆನ್ಸ್ ಚಾಲಕ ರೋಡ್ ಹಂಪ್ ಅರಿಯದೆ ವೇಗವಾಗಿ ಆಂಬುಲೆನ್ಸ್‌ ಸಾಗಿಸಿದ್ದಾನೆ ಅಷ್ಟೋತ್ತಿಗೆ ಒಳಗಿದ್ದ ಪಾಂಡುರಂಗ ಅವರ ಕೈ ಬೆರಳುಗಳು ಚಲನೆಯಲ್ಲಿರುವುದು ಕುಟುಂಬ ಸದಸ್ಯರು ನೋಡಿದ್ದಾರೆ ಅಲ್ಲದೆ ಹೃದಯ ಬಡಿತ ಪರಿಶೀಲಿಸಿದಾಗ ಪಾಂಡುರಂಗ ಅವರು ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ ಕೂಡಲೇ ಯೂ ಟರ್ನ್ ತೆಗೆದುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ವ್ಯಕ್ತಿ ಜೀವಂತವಾಗಿರುವುದನ್ನು ದೃಢಪಡಿಸಿದ್ದು ಕೂಡಲೇ ಅವರನ್ನು ಆಂಜಿಯೋಪ್ಲಾಸ್ಟಿಗೆ ಒಳಪಡಿಸಲಾಯಿತು ಇದಾದ ಬಳಿಕ ಸುಮಾರು 15 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕರೆತರಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನೇಪಾಲ: ಜೈಲು ಸಿಬ್ಬಂದಿ – ಕೈದಿಗಳ ನಡುವೆ ಸಂಘರ್ಷ!! ಜೈಲಿನಿಂದ ಪರಾರಿಯಾದ ಕೈದಿಗಳ ಸಂಖ್ಯೆ ಎಷ್ಟು ಗೊತ್ತೇ?

ಕಾಲ್ಮಂಡು: ಗಲಭೆ ಪೀಡಿತ ನೇಪಾಲದ ಜೈಲೊಂದರಲ್ಲಿ ಭದ್ರತ ಸಿಬಂದಿ ಹಾಗೂ ಕೈದಿಗಳ ನಡುವೆ ಗುರುವಾರ…