ಅಪರಾಧ

ಸಲಿಂಗಕಾಮಿಗಳ ಈ ಘನಘೋರ ಕೃತ್ಯಕ್ಕೆ 100 ವರ್ಷ ಗಳ ಜೈಲು ಶಿಕ್ಷೆ!!

tv clinic
ಸಲಿಂಗ ದಂಪತಿಗೆ 100 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಅಷ್ಟೇ ಅಲ್ಲ, ಅಪರಾಧದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಧೀಶರು ಅವರಿಗೆ ಪೆರೋಲ್‌ ನೀಡಲಾಗುವುದಿಲ್ಲ ಎಂದು ಹೇಳಿದ್ದರಿಂದ ಇಬ್ಬರೂ ಈಗ ತಮ್ಮ ಇಡೀ ಜೀವನವನ್ನು ಜೈಲಿನಲ್ಲೇ ಕಳೆಯಬೇಕಾಗಿದೆ. ಅಷ್ಟಕ್ಕೂ ಇಷ್ಟು ಕಠಿಣ ಶಿಕ್ಷೆ 

ಈ ಸುದ್ದಿಯನ್ನು ಶೇರ್ ಮಾಡಿ

ಜಾರ್ಜಿಯಾದ ನ್ಯಾಯಾಲಯವೊಂದು ಸಲಿಂಗ

core technologies

ದಂಪತಿಗೆ 100 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಅಷ್ಟೇ ಅಲ್ಲ, ಅಪರಾಧದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಧೀಶರು ಅವರಿಗೆ ಪೆರೋಲ್‌ ನೀಡಲಾಗುವುದಿಲ್ಲ ಎಂದು ಹೇಳಿದ್ದರಿಂದ ಇಬ್ಬರೂ ಈಗ ತಮ್ಮ ಇಡೀ ಜೀವನವನ್ನು ಜೈಲಿನಲ್ಲೇ ಕಳೆಯಬೇಕಾಗಿದೆ. ಅಷ್ಟಕ್ಕೂ ಇಷ್ಟು ಕಠಿಣ ಶಿಕ್ಷೆ ಕೊಡಲು ಕಾರಣವೇನು??

akshaya college

34 ವರ್ಷದ ವಿಲಿಯಂ ಮತ್ತು 36 ವರ್ಷದ ಜಕಾರಿ ಜುಲಾಕ್ ಎಂಬ ಸಲಿಂಗಕಾಮಿಗಳು ಇತ್ತೀಚಿಗಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಕೆಲ ವರ್ಷಗಳ ಬಳಿಕ ಈ ಜೋಡಿ 12 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದು, ಈ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಪರಾಧಿಗಳು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಸ್ನೇಹಿತರಿಗೆ ಮಾರಾಟ ಮಾಡಿದ್ದಾರೆ.

ವಿಷಯ ತಿಳಿದ ವಾಲ್ಟನ್ ಕೌಂಟಿ ಪೊಲೀಸರು ಸಲಿಂಗಕಾಮಿ ದಂಪತಿಗಳ ಮನೆಯ ಮೇಲೆ ದಾಳಿ ನಡೆಸಿದ್ದು, ತನಿಖೆಯ ವೇಳೆ ಕಂಡುಬಂದ ದೃಶ್ಯಗಳನ್ನು ನೋಡಿ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ವರದಿಯ ಪ್ರಕಾರ, ಪೊಲೀಸರು ಸಲಿಂಗಕಾಮಿ ದಂಪತಿಗಳ ಮನೆಯಿಂದ 7TB ಗಿಂತ ಹೆಚ್ಚಿನ ಡಿಜಿಟಲ್ ಡೇಟಾ ಮತ್ತು ಗ್ರಾಫಿಕ್ ಫೋಟೋಗಳು ಮತ್ತು ಅಶ್ಲೀಲ ವೀಡಿಯೊಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಘಟನೆಯಿಂದ ಇನ್ಮುಂದೆ ನಿರ್ಗತಿಕ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಮುಂದೆ ಬರುವ ಜನರ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕು ಎಂದು ನ್ಯಾಯಲಯ ಎಚ್ಚರಿಕೆ ನೀಡಿದೆ. ಇಬ್ಬರು ಅನಾಥ ಮಕ್ಕಳನ್ನು ಈ ರೀತಿ ಬಳಸಿಕೊಂಡ ಸಲಿಂಗಕಾಮಿ ದಂಪತಿಗಳ ಮನೆಯನ್ನು ‘ಹೌಸ್‌ ಆಫ್ ಹಾರ‌ರ್’ ಎಂದು ಬಣ್ಣಿಸಿದ ನ್ಯಾಯಾಲಯ, ಕೊನೆಗೂ ಈ ದಂಪತಿಗೆ 100 ವರ್ಷ ಜೈಲು ಶಿಕ್ಷೆ ವಿಧಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪೋಳ್ಯ ಅಪಘಾತ ಪ್ರಕರಣ: ಆಪಾದಿತ ಕಾರು ಚಾಲಕ ಮದ್ಯಪಾನ ಮಾಡಿರುವುದು ವೈದ್ಯಕೀಯ ತಪಾಸಣೆಯಿಂದ ಸಾಬೀತು – ಪ್ರಕರಣ ದಾಖಲು

ಪುತ್ತೂರು: ಪೋಳ್ಯದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಕಾರು ಚಾಲಕನ ವಿರುದ್ಧ ಪುತ್ತೂರು ಸಂಚಾರ…