Gl
ಅಪರಾಧ

ವಿಟ್ಲ: ಹಾಡಹಗಲೇ ಮನೆ ಬಾಗಿಲು ಮುರಿದು ನಗ-ನಗದು ದರೋಡೆ..!

ವಿಟ್ಲ: ಹಾಡಹಗಲೇ ಮನೆಗೆ ನುಗ್ಗಿ ಅಪಾರ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿ, ಕಳ್ಳರು ಪರಾರಿಯಾದ ಘಟನೆ ಕುಡ್ತಮುಗೇರ್ ಸಮೀಪ ಮಂಕುಡೆ ಎಂಬಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಹಾಡಹಗಲೇ ಮನೆಗೆ ನುಗ್ಗಿ ಅಪಾರ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿ, ಕಳ್ಳರು ಪರಾರಿಯಾದ ಘಟನೆ ಕುಡ್ತಮುಗೇರ್ ಸಮೀಪ ಮಂಕುಡೆ ಎಂಬಲ್ಲಿ ನಡೆದಿದೆ.

rachana_rai
Pashupathi

ಕುಡ್ತಮುಗೇರು ಮಂಕುಡೆ ನಿವಾಸಿ ಗಣೇಶ್ ರೈ ಎಂಬವರ ಮನೆಗೆ ಹಾಡು ಹಗಲೇ ಕಳ್ಳರು ನು‌ಗ್ಗಿ ದೊಡ್ಡ ಮೊತ್ತದ ಚಿನ್ನ ಮತ್ತು ನಗದನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.

akshaya college

ಗಣೇಶ್ ರೈ ಕೆಲಸಕ್ಕೆ ಹೋಗಿದ್ದು, ಮನೆಯ ಯಜಮಾನಿ ವಿಟ್ಲ ಸಂತೆಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 12 ಗಂಟೆಯಿಂದ ಒಂದೂವರೆ ಗಂಟೆಯ ಒಳಗೆ ಈ ಕೃತ್ಯ ನಡೆದಿರುತ್ತದೆ ಎನ್ನಲಾಗಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯ ಹಿಂದಿನ ಬಾಗಿಲನ್ನು ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಇದೀಗ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಕೆಲ ದಿನಗಳ ಹಿಂದೆ ಅಳಕೆಮಜಲಿನಲ್ಲಿ ಕೂಡ 2 ಮನೆಗಳಿಂದ ಇದೇ ರೀತಿಯ ಮಾದರಿಯಲ್ಲಿ ಇದೇ ಸಮಯದಲ್ಲಿ ಕಳ್ಳತನೆ ನಡೆದಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts