ಅಪರಾಧ

70 ಸಾವಿರ ರೂ.ನ ಕಾರಿಗೆ ಲಕ್ಷ ರೂ. ದಂಡ: ವಿದ್ಯಾರ್ಥಿಗೆ ಇಷ್ಟೊಂದು ದಂಡ ವಿಧಿಸಲು ಕಾರಣವೇನು ಗೊತ್ತೇ?

GL

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಬೆಂಗಳೂರಿನಲ್ಲಿ ವಿದ್ಯಾರ್ಥಿಯೊಬ್ಬ 70 ಸಾವಿರ ಕಾರಿಗೆ 1.11 ಲಕ್ಷ ರೂ. ದಂಡ ಹಾಕಿಸಿಕೊಂಡಿದ್ದಾನೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಅಷ್ಟಕ್ಕೂ ಈ ವಿದ್ಯಾರ್ಥಿಗೆ ಅಷ್ಟೊಂದು ದಂಡ ಯಾಕೆ ಹಾಕಿದ್ದಾರೆ ಗೊತ್ತಾ? ಈ ಯುವಕ ತನ್ನ ಕಾರಿನ ಸೈಲೆನ್ಸರ್​​ನ್ನು ಅಕ್ರಮವಾಗಿ ಮಾಡಿಫೈ ಮಾಡಿದ್ದಾನೆ ಎಂದು ದಂಡ ಹಾಕಿದ್ದಾರೆ. ಈ ಸೈಲೆನ್ಸರ್​​ ಹಾಕಿದ ಕಾರಣ ವಿಪರೀತ ಶಬ್ದ ಮಾಲಿನ್ಯ ಆಗುತ್ತಿದೆ. ಜತೆಗೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಪೊಲೀಸರು ಈ ವಿದ್ಯಾರ್ಥಿಗೆ ಭಾರೀ ದಂಡ ಹಾಕಿದ್ದಾರೆ. ಈ ಮೂಲಕ ಯುವಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಜನವರಿ 2 ರಂದು ನಗರದ ಹೆಣ್ಣೂರು ರಸ್ತೆ ಬಳಿ ಕಾರು ಚಲಾಯಿಸುತ್ತಿದ್ದಾಗ, ಕಾರಿನ ಹಿಂದೆಯಿಂದ ಬೆಂಕಿಯ ಕಿಡಿ ಹಾಗೂ ದೊಡ್ಡ ಶಬ್ದ ಬರುವುದನ್ನು ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಬಗ್ಗೆ ದಾರಿಹೋಕರೊಬ್ಬರು ಪೊಲೀಸರಿಗೆ ದೂರ ನೀಡಿದ್ದರು. ಈ ದೂರಿನ ಆಧಾರ ಮೇಲೆ ಸಂಚಾರಿ ಪೊಲೀಸರು ಕ್ಷಿಪ್ರ ಕಾರ್ಯಪವೃತ್ತರಾಗಿ ವಾಹನ ಹಾಗೂ ವಿದ್ಯಾರ್ಥಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದರು.

ಸಂಚಾರ ಪೊಲೀಸರು ಪ್ರಕರಣ ದಾಖಲಿಸುವ ಬದಲು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ನಿಯಮ ಉಲ್ಲಂಘನೆಯ ಬಗ್ಗೆ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ನಂತರ ಈ ಬಗ್ಗೆ ತನಿಖೆ ನಡೆಸಿದಾಗ, ಆರ್‌ಟಿಒ ಅಧಿಕಾರಿಗಳು ಕಾರಿನಲ್ಲಿ ಅಕ್ರಮವಾಗಿ ಮಾರ್ಪಡಿಸಿದ ಸೈಲೆನ್ಸರ್ ಇರುವುದನ್ನು ದೃಢಪಡಿಸಿದ್ದರು. ಅದು ಅತಿಯಾದ ಶಬ್ದವನ್ನು ಮಾತ್ರವಲ್ಲದೆ ಇತರ ವಾಹನ ಚಾಲಕರಲ್ಲಿ ಭಯವನ್ನು ಉಂಟು ಮಾಡುವಂತೆ ಸೈಲೆನ್ಸರ್​​​​ನಿಂದ ಕಿಡಿ ಬರುತ್ತಿತ್ತು ಎಂದು ಹೇಳಲಾಗಿದೆ.

ಈ ಮಾಡಿಫೈ ಮೋಟಾರು ವಾಹನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಅಪಾಯಕಾರಿಯಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿತು ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ವಿದ್ಯಾರ್ಥಿಗೆ ರಾಜಕೀಯ ಪ್ರಭಾವ ಕೂಡ ಇತ್ತು ಎಂದು ಹೇಳಲಾಗಿದೆ. ಕಡಿಮೆ ದಂಡವನ್ನು ಹಾಕಿ ಬಿಟ್ಟು ಕಳಿಸಿ ಎಂದು ಒತ್ತಡವನ್ನು ಕೂಡ ಪೊಲೀಸರ ಮೇಲೆ ಹಾಕಲಾಗಿತ್ತು. ಆದರೆ ಪೊಲೀಸರು ಇದನ್ನು ಲೆಕ್ಕಿಸದೆ 1,11,500 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ (DH) ವರದಿ ಮಾಡಿದೆ.

ವಿದ್ಯಾರ್ಥಿ ಈ ದಂಡವನ್ನು ಪಾವತಿಸಿದ ನಂತರ ಕಾರನ್ನು ಬಿಟ್ಟು ಕಳಿಸಿದ್ದಾರೆ. ಈ ಉಲ್ಲಂಘನೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts