ಅಪರಾಧ

ಕೆಟ್ಟು ಹೋದ ವಾಹನದಲ್ಲಿದ್ದ ಗೋವುಗಳ ಪತ್ತೆ ಪ್ರಕರಣ: ಇಬ್ಬರ ಬಂಧನ!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗೋವುಗಳನ್ನು ಸಾಗಿಸುವ ವೇಳೆ ವಾಹನ ಕೆಟ್ಟು ಹೋಗಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

core technologies

ಉಳ್ಳಾಲ ಸಜಿಪನಡು ನಿವಾಸಿಗಳಾದ  ಆಶಿಕ್ ಪಾಷಾ (26) ಹಾಗೂ ಅಬ್ದುಲ್‌ ಲತೀಫ್ (25) ಬಂಧಿತರು.

ನ. 29ರಂದು ವಾಹನವೊಂದರಲ್ಲಿ ಗೋವುಗಳನ್ನು ಸಾಗಿಸುತ್ತಿದ್ದು, ನರಿಮೊಗರು ಎಂಬಲ್ಲಿ ವಾಹನ ಕೆಟ್ಟು ನಿಂತಿತ್ತು. ಗೋವುಗಳ ಸಹಿತ ವಾಹನವನ್ನು ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಇನ್ನೋವಾ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಕಾರಲ್ಲಿ 4 ಕರು ಹಾಗೂ 1 ಗೋವು ಇತ್ತು.

ಪಾಣಾಜೆ ನಿವಾಸಿ ಪ್ರೇಮ್ ರಾಜ್ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 117/2025, ಕಲಂ: 4, 5 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ ಮತ್ತು ಕಲಂ: 303(1) BNS 2023 ಮತ್ತು 106 BNSS -2023 ರಂತೆ ಪ್ರಕರಣ ದಾಖಲಾಗಿರುತ್ತದೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts