ಪುತ್ತೂರು: ಪೋಳ್ಯದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಕಾರು ಚಾಲಕನ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಶಶಿಕುಮಾರ್ ಅವರು ಪುತ್ತೂರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನ. 11ರಂದು ಸಂಜೆ ಘಟನೆ ನಡೆದಿದ್ದು, ಕಾರು ಚಾಲಕ ಕೊಡಿಪ್ಪಾಡಿ ನಿವಾಸಿ ಮಹಮ್ಮದ್ ತೌಫಿಕ್ (29) KA-04-MT- 2455 ನೋಂದಣಿಯ ಕಾರನ್ನು ಕಬಕದಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು, ಎದುರಿನಿಂದ ಹೋಗುತ್ತಿದ್ದ KA 21EB8634 ನೋಂದಣಿಯ ಸ್ಕೂಟರಿಗೆ ಢಿಕ್ಕಿ ಹೊಡೆದಿತ್ತು. ಗಾಯಾಳು ಸ್ಕೂಟರ್ ಸವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ, ಅ.ಕ್ರ: 142/2025, ಕಲಂ: 281, 125 (b) ಬಿ.ಎನ್.ಎಸ್ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರು ಚಾಲಕ ಮಹಮ್ಮದ್ ತೌಫೀಕ್ ಎಂಬಾತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಮದ್ಯಪಾನ ಮಾಡಿರುವುದು ದೃಢಪಟ್ಟಿರುತ್ತದೆ. ಇದೇ ವರ್ಷ ನಡೆದ ಇನ್ನೊಂದು ಪ್ರಕರಣದಲ್ಲಿ ಇದೇ ಆರೋಪಿಯು ನಿರ್ಲಕ್ಷತನದಿಂದ ವಾಹನ ಚಾಲನೆ ಮಾಡಿ ಅಪಘಾತ ನಡೆಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅರೋಪಿಯ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ.ಕ್ರ: 142/2025 ಪ್ರಕರಣದಲ್ಲಿ, ಕಲಂ: 110 BNS ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವಿಷಾಧ:
ಅಪಘಾತ ನಡೆದ ಸಂದರ್ಭ ಸ್ಥಳೀಯರು ನೀಡಿದ ಮಾಹಿತಿಯನ್ನಾಧರಿಸಿ ಶಕ್ತಿ ನ್ಯೂಸ್ ವರದಿ ಮಾಡಿದ್ದು, ಗಾಯಾಳು ಮೃತಪಟ್ಟಿದ್ದರು ಎಂದು ತಪ್ಪಾಗಿ ಪ್ರಕಟವಾಗಿತ್ತು. ಗಾಯಾಳು ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ, ವರದಿ ತಪ್ಪಾಗಿ ಪ್ರಕಟವಾಗಿದೆ ಎನ್ನುವುದು ಅರಿವಿಗೆ ಬಂದಿತ್ತು. ತಕ್ಷಣದಲ್ಲಿ ಸುದ್ದಿಯನ್ನು ಸರಿಪಡಿಸಿದರೂ, ತಪ್ಪು ಸಂದೇಶವೊಂದು ತಪ್ಪಾಗಿ ರವಾನೆ ಆಗುವಂತಾಯಿತು. ಈ ತಪ್ಪಿಗೆ ವಿಷಾಧ ವ್ಯಕ್ತಪಡಿಸುತ್ತಾ, ಗಾಯಾಳು ಶಶಿಕುಮಾರ್ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದೇವೆ.

























