ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ ಆಗ್ತಾನೆ ಎಂದು ಹೊಡೆಯಬಾರದ ಜಾಗಕ್ಕೆ ಹೊಡೆದಿದ್ದಾಳೆ. ಅಂಕಲ್ ಜೊತೆ ಸುಖವಾಗಿರಬಹುದು ಅಂದುಕೊಂಡವಳು, ಇದೀಗ ಕಂಬಿ ಹಿಂದೆ ಸೇರಿದ್ದಾಳೆ.
ಇದು ನಡೆದಿರುವುದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಂದಿರಾನಗರದಲ್ಲಿ. ಸುಪನಾಮಿ ಶಿವಮ್ಮ ಆರೋಪಿ.
ಮದ್ವೆಯಾಗಿ 13 ವರ್ಷ ಆಗಿತ್ತು. ಮಕ್ಕಳೂ ಸಹ ಹೆಗಲೆತ್ತರಕ್ಕೆ ಬೆಳೆದಿದ್ರು. ಆದ್ರೂ ಪಕ್ಕದೂರಿನ ಅಂಕಲ್ ಮೇಲೆ ಕಣ್ಣು ಹಾಕಿದ್ದಾಳೆ. ಹೆಚ್.ಡಿ ಕೋಟೆಯ ಬಲರಾಮ ಅನ್ನೋನ ಜೊತೆ ಲವ್ವಿ- ಡವ್ವಿ ಶುರುವಾಗಿತ್ತು. ಅದು ನಾಲ್ಕು ವರ್ಷದಿಂದ.
ಬಲರಾಮನ ತೋಳ ತೆಕ್ಕೆಗೆ ಬಿದ್ದಿದ್ದ ಶಿವಮ್ಮ, ಗಂಡ ಮಕ್ಕಳನ್ನೇ ಮರೆತು ನಿಂತಿದ್ಲು ಎಂಬ ಆರೋಪ ಕುಟುಂಸ್ಥರದ್ದು.
ವಿಷಯ ಗಂಡನಿಗೆ ತಿಳಿಯಿತು. ಸುಖ ಸಂಸಾರ ಬೀದಿ ರಂಪಾಕ್ಕೆ ಕಾರಣವಾಯಿತು. ನ್ಯಾಯಪಂಚಾಯ್ತಿಯೂ ನಡೆಯಿತು. ಆದ್ರೂ ಸರಿದಾರಿಗೆ ಬರಲಿಲ್ಲ.
ಮೊನ್ನೆ ರಾತ್ರಿ ಫೋನಲ್ಲೇ ಲವ್ ಕಹಾನಿ ಜೋರಾಗಿ ನಡೆಯುತ್ತಿತ್ತು. ವೀರಣ್ಣ ಕ್ಲಾಸ್ ತೆಗೆದುಕೊಂಡ. ಎಚ್ಚರಿಕೆಯನ್ನೂ ನೀಡಿದ.
ಮರುದಿನ ಬೆಳಿಗ್ಗೆ ಗಂಡ ನೇಣು ಹಾಕಿಕೊಂಡಿದ್ದಾನೆ ಎಂದು ಹೊರ ಬಂದು ಕೂಗಾಡಿದಳು. ಗ್ರಾಮಸ್ಥರು ಬಂದು ನೋಡಿದರೆ ಪತಿ ಪರಲೋಕ ಸೇರಿದ್ದ. ಪೊಲೀಸರು ಬಂದ್ರು. ಎಂಟಾಣೆ ಕಣ್ಣೀರಿನ ಮೇಲೆ ಅನುಮಾನು ಬಂತು. ವಿಚಾರಣೆ ಶುರುವಾಯ್ತು. ಸತ್ಯ ಹೊರಬಂತು.
ಅಂದು ರಾತ್ರಿ ಜಗಳ ತಾರಕಕ್ಕೇರಿತ್ತು. ಎಚ್ಚರಿಕೆ ನೀಡಿದ್ದ ಗಂಡನಿಗೆ ಬುದ್ಧಿ ಕಲಿಸಲು ಪತಿ ಮುಂದಾಗಿದ್ದಳು. ಗಂಡ ಊಟ ಮಾಡಿ ಮಲಗಿದ್ದ ಸಂದರ್ಭಕ್ಕೆ ಕಾಯುತ್ತಿದ್ದಳು. ಒಂದೇ ಒಂದು ಏಟು ಗಂಡನ ಮರ್ಮಾಂಗಕ್ಕೆ. ಅಷ್ಟೇ ಗಂಡ ಕೊನೆಯುಸಿರೆಳೆದಿದ್ದ. ದೇಹವನ್ನು ನೇಣಿಗೆ ಹಾಕಿದಳು.
ಸಪ್ತಪದಿ ತುಳಿದವನನ್ನು ಪರಲೋಕಕ್ಕೆ ಸೇರಿಸಿದ ಪತ್ನಿ, ಇದೀಗ ಕಂಬಿ ಹಿಂದೆ ಸೇರಿದ್ದಾಳೆ.

























