ಪುತ್ತೂರು: ಗುರುವಾರ ಸಂಜೆ ಆಟೋ ಚಾಲಕನನ್ನು ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಎ.ಎಸ್.ಐ. ಚಿದಾನಂದ್ ರೈ ಹಾಗೂ ಶೈಲ ಎಂ.ಕೆ. ಅಮಾನತುಗೊಂಡ ಟ್ರಾಫಿಕ್ ಪೊಲೀಸರು.
ಆಟೋ ಚಾಲಕ ಕುರಿಯದ ಬಶೀರ್ ಎಂಬವರು ಸಮವಸ್ತ್ರ ಧರಿಸದೇ ಆಟೋ ಚಲಾಯಿಸುತ್ತಿದ್ದು, ಇದನ್ನು ಗಮನಿಸಿದ ಪೊಲೀಸರು ತಡೆದಿದ್ದಾರೆ. ಇದನ್ನು ಲೆಕ್ಕಿಸದೇ ತೆರಳಿದ ಆಟೋ ಚಾಲಕನನ್ನು ಹಿಂಬಾಲಿಸಿ ವಾಹನವನ್ನು ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿರುತ್ತಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ಇದನ್ನು ಪರಿಶೀಲಿಸಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.