ವಿಜಯಪುರ ಎಸ್‌ಬಿಐ ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಗಳು ಸಿಬ್ಬಂದಿಯ ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. ಈ ವೇಳೆ 1 ಕೋಟಿ ನಗದು, 13 ಕೆಜಿ ಚಿನ್ನಾ ಭರಣ ದೋಚಿ ಪರಾರಿಯಾಗಿದ್ದಾರೆಂದು ಮಾಹಿತಿ ದೊರೆತಿದೆ.
ಮಂಗಳವಾರ ಸಂಜೆ 6.30ರ ಸುಮಾರಿಗೆ ಬ್ಯಾಂಕ್‌ಗೆ ಮೂರ್ನಾಲ್ಕು ದರೋಡೆಕೋರರು ನುಗ್ಗಿ ಬ್ಯಾಂಕ್‌ನಲ್ಲಿದ್ದ ಅಧಿಕಾರಿ, ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ಕೂಡಿ ಹಾಕಿದ್ದಾರೆ. ಅಲ್ಲದೆ, ಪಿಸ್ತೂಲ್, ಮಾರಕಾಸ್ತ್ರಗಳ ಮೂಲಕ ಬ್ಯಾಂಕ್ ಸಿಬ್ಬಂದಿಗೆ ಬೆದರಿಸಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
1 ಕೋಟಿ ರೂ.ನಗದು, 13 ಕೆಜಿ ಚಿನ್ನಾಭರಣ ದರೋಡೆ?
ಪ್ರಾಥಮಿಕ ಮಾಹಿತಿ ಪ್ರಕಾರ, 1 ಕೋಟಿ ರೂಪಾಯಿ ನಗದು ಹಾಗೂ 12-13 ಕೆ.ಜಿ. ಚಿನ್ನಾಭರಣ ದರೋಡೆಯಾಗಿರುವ ಸಾಧ್ಯತೆ ಇದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಖದೀಮರು ಚಿನ್ನ, ಹಣದ ಜೊತೆಗೆ ಸಿಸಿಟಿವಿ ಡಿವಿಆರ್ ಸಮೇತ ಕಾರಿನಲ್ಲಿ ತುಂಬಿಕೊಂಡು ಚೆಕ್ ಪೋಸ್ಟ್ ಮಾರ್ಗ ಬದಲಿಸಿ ಮಹಾರಾಷ್ಟ್ರದ ಕಡೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲ ತಿಂಗಳ ಹಿಂದೆ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಕೆನರಾ ಬ್ಯಾಂಕ್‌ನಲ್ಲಿ 40 ಕೆಜಿಗೂ ಅಧಿಕ ಚಿನ್ನಾಭರಣ ಕಳುವಾಗಿತ್ತು. ಈ ಪ್ರಕರಣವನ್ನು ತಿಂಗಳಲ್ಲೇ ಪೊಲೀಸರು ಭೇದಿಸಿ, ಆರೋಪಿಗಳನ್ನು ಬಂಧಿಸಿದ್ದರು.
ದರೋಡೆ ನಡೆದಿದ್ದು ಹೇಗೆ?
ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ, ದರೋಡೆ ನಡೆಸಿದ ಮುಸುಕುಧಾರಿಗಳು, ಬ್ಯಾಂಕಿನಿಂದ 13 ಕೆಜಿ ಚಿನ್ನ ಸಹಿತ 1 ಕೋಟಿ ರೂ. ನಗದು ಲೂಟಿ ಬ್ಯಾಂಕಿನ ಸಿಸಿಟಿವಿಯ ಡಿವಿಆರ್ ಸಹಿತ ಪರಾರಿಯಾದ ಕಳ್ಳರು.