ಅಪರಾಧ

ಕಡಬ: ಪಿಗ್ಮಿ ಸಂಗ್ರಾಹಕ ಶಶಿಧರ ಆತ್ಮಹತ್ಯೆ!!

ಈ ಸುದ್ದಿಯನ್ನು ಶೇರ್ ಮಾಡಿ

ಕಡಬ: ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ನಿವಾಸಿ, ನೂಜಿಬಾಳ್ತಿಲ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಪಿಗ್ನಿ ಸಂಗ್ರಾಹಕ ಶಶಿಧರ ಬಿ.ಕೆ. ಅವರುನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

akshaya college

ನಿನ್ನೆ ರಾತ್ರಿ 10ಘಂಟೆಗೆ ಊಟ ಮಾಡಿ ಮಲಗಿದ್ದು, ಬೆಳಿಗ್ಗೆ ಎದ್ದಾಗ ಗಂಡ ಮನೆಯಲ್ಲಿ ಇಲ್ಲದೇ ಇದ್ದು ಮನೆಯ ಪರಿಸರದಲ್ಲಿ ಹುಡುಕಿ ನೆರೆ ಮನೆಯ ಲತೀಶ್ ಕುಮಾರ್ ರವರಿಗೆ ದೂರವಾಣಿ ಮೂಲಕ ತಿಳಿಸಿ ಲತೀಶ ರವರು ತೋಟದಲ್ಲಿ ಹುಡುಕುವ ಸಮಯ ಶಶಿಧರ ರವರು ತೋಟದಲ್ಲಿ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಲತೇಶ ರವರು ತಿಳಿಸಿರುತ್ತಾರೆ. ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿರುತ್ತಾರೆ. ಗಂಡ ಶಶಿಧರ ರವರು ಯಾವುದೋ ವಿಷಯಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಪೆಗೊಂಡು ರಾತ್ರಿ  ಕುತ್ತಿಗೆ ನೇಣ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಡಬ ಪೊಲೀಸ್‌ ಠಾಣೆಯಲ್ಲಿ ಯುಡಿಆರ್ ನಂ: 24/2025 ಕಲಂ:194 3 BNSS-2023. ನಂತೆ ಪ್ರಕರಣ ದಾಖಲಾಗಿರುತ್ತದೆ.

ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts