ಕಾಠ್ಮಂಡು: ನೇಪಾಳದ ಕೆಪಿ ಶರ್ಮಾ ಒಲಿ ಸರ್ಕಾರದ ವಿರುದ್ಧ ಯುವಜನತೆ ಮುಗಿ ಬಿದ್ದಿದೆ. 26 ಸಾಮಾಜಿಕ ಜಾಲತಾಣಗಳನ್ನು ಬ್ಯಾನ್ ಮಾಡುವ ಸರ್ಕಾರದ ನಿರ್ಧಾರಕ್ಕೆ ಯುವ ಜನತೆ ಕೆಂಡಾಮಂಡಲವಾಗಿದ್ದು, ಹೋರಾಟ ಆರಂಭಿಸಿದ್ದಾರೆ.
ಆನ್‌ಲೈನ್‌ನಲ್ಲಿ ಪ್ರಾರಂಭವಾದ ಹೋರಾಟ ಸೋಮವಾರ (ಸೆ.08) ಬೀದಿಗೆ ಬಂದಿದೆ.
ನೇಪಾಳ ಸಂಸತ್ತಿನ ಬಳಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಮೂವರು ಪ್ರತಿಭಟನಾಕಾರರು ಸಾವನ್ನ ಪ್ಪಿದ್ದು, 80 ಕ್ಕೂ ಹೆಚ್ಚು ಜನರು ಗಾಯಗೊಂಡರು.
ಸಾವಿರಾರು ಯುವ ಪ್ರತಿಭಟನಾಕಾರರು ಕಾಠ್ಮಂಡುವಿನಲ್ಲಿ ಸೇರಿದ್ದಾರೆ. ಈ ಪ್ರತಿಭಟನೆಯನ್ನು ‘ಜೆನ್ ಜಿ ಕ್ರಾಂತಿ’ (Gen Z Revolution) ಎಂದು ಕರೆಯಲಾಗುತ್ತಿದೆ. ಹಲವರು ನಿರ್ಬಂಧಿತ ವಲ ಯಗಳನ್ನು ಉಲ್ಲಂಘಿಸಿ, ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಒಳಗೆ ಪ್ರವೇಶಿಸಿದರು. ಘರ್ಷಣೆಗಳು ಉಲ್ಬಣಗೊಳ್ಳುತ್ತಿದ್ದಂತೆ, ಪೊಲೀಸರು ಹಲವಾರು ಸ್ಥಳಗಳಲ್ಲಿ ಗುಂಡು ಹಾರಿಸಿದರು. ಇದ ರಿಂದಾಗಿ ರಾಜಧಾನಿ ಕಾಲ್ಮಂಡುವಿನಲ್ಲಿ ಕರ್ಪ್ಯೂ ವಿಧಿಸಲಾಗಿದೆ.
ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನೋಂದಾಯಿಸಲು ವಿಫಲವಾದ ಕಾರಣಕ್ಕಾಗಿ ಸೆಪ್ಟೆಂಬರ್ 4 ರಂದು ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್ ಮತ್ತು ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿರ್ಬಂಧಿಸ ಲು ಸರ್ಕಾರ ತೆಗೆದುಕೊಂಡಿದೆ. ಇದು ಜೆನ್ ಜಿ ಚಳುವಳಿಗೆ ಕಾರಣ ವಾಯಿತು.
ನಿಷೇಧವು ನಿಯಂತ್ರಕ ಅನುಸರಣೆಯ ವಿಷಯ ಎಂದು ಸರ್ಕಾರ ಹೇಳಿಕೊಂಡರೂ, ಪ್ರತಿಭಟನಾಕಾರರು ಇದನ್ನು ವಿಮರ್ಶಾತ್ಮಕ ಧ್ವ ನಿಗಳು ಮತ್ತು ಸಂಘಟಿತ ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಗುರಿಯನ್ನು ಹೊಂದಿರುವ ನೇರ ಸೆನ್ಸಾರ್‌ಶಿಪ್ ಕ್ರಮವೆಂದು ಕ ರೆದಿದ್ದಾರೆ.