ನವದೆಹಲಿ: ದೆಹಲಿಯ ಕೆಂಪು ಕೋಟೆ ಆವರಣದಲ್ಲಿ ದೊಡ್ಡ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕೆಂಪು ಕೋಟೆಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಜೈನ ಧರ್ಮದ ಧಾರ್ಮಿಕ ಸಮಾರಂಭದ ವೇಳೆ ವೇದಿಕೆಯಲ್ಲಿರಿಸಿದ್ದ ಬೆಲೆಬಾಳುವ ರತ್ನ ಖಚಿತ ಕಲಶವನ್ನು ಕದ್ದೊಯ್ಯ ಲಾಗಿದೆ.
ಈ ಘಟನೆ ಕಳೆದ ಮಂಗಳವಾರ (ಸೆ. 2) ರ ಮಂಗಳವಾರ ನ ಡೆದಿತ್ತು. ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಭಾಗವಹಿಸಿದ್ದರು ಈ ವೇಳೆ ಗಣ್ಯರನ್ನು ವೇದಿಕೆಗೆ ಸ್ವಾಗತ ಮಾಡುವ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಕಲಶ ಕಣ್ಮ ರೆಯಾಗಿದೆ.
ಉದ್ಯಮಿ ಸುಧೀರ್ ಜೈನ್ ಪ್ರತಿದಿನ ಪೂಜೆಗೆ ಕಲಶವನ್ನು ತ ರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ದಿನವೂ ಅವ ರು ಕಲಶವನ್ನು ತಂದಿದ್ದರು. ಆದರೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ ಎನ್ನಲಾಗಿದೆ.
ಶಂಕಿತನ ಗುರುತು ಪತ್ತೆ:
ದೆಹಲಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕಳ್ಳ ಕಲಶವನ್ನು ಕದಿಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಶಂಕಿತನನ್ನು ಗುರುತಿಸಲಾಗಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸ ಲಾಗುವುದು ಎದು ಹೇಳಿದ್ದಾರೆ.
ಸೆ 9 ವರೆಗೆ ಕಾರ್ಯಕ್ರಮ:
ಕೆಂಪು ಕೋಟೆ ಸಂಕೀರ್ಣದಲ್ಲಿರುವ ಜೈನ ಸಮುದಾಯದ ಆಚ ರಣೆ ಆಗಸ್ಟ್ 15 ರಿಂದ ಉದ್ಯಾನವನದಲ್ಲಿ ನಡೆಯುತ್ತಿದ್ದು, ಸೆಪ್ಟೆಂಬರ್ 9 ರವರೆಗೆ ಮುಂದುವರಿಯಲಿದ್ದು ಇದರ ನಡುವೆ ಈ ಘಟನೆ ನಡೆದಿದ್ದು ಕಾರ್ಯಕ್ರಮ ಆಯೋಜಕರು ತಲೆ ತ ಗ್ಗಿಸುವಂತಾಗಿದೆ.
1 ಕೋಟಿ ಮೌಲ್ಯದ ಕಲಶ:
ಕಳವು ಮಾಡಿದ ಕಲಶವು ಸುಮಾರು 1 ಕೋಟಿ ರೂಪಾಯಿ ಮೌಲ್ಯದ್ದಾಗಿತ್ತು ಎಂದು ಹೇಳಲಾಗುತ್ತಿದೆ. ಇಡೀ ಕಲಶವು ಚಿನ್ನ ಮತ್ತು ವಜ್ರಗಳಿಂದ ಕೂಡಿದ್ದು, ಇದನ್ನು 760 ಗ್ರಾಂ ಚಿನ್ನದಿಂದ ಮಾಡಲಾಗಿತ್ತು. ಕಲಶದ ಮೇಲೆ 150 ಗ್ರಾಂ ವಜ್ರಗಳು, ಮಾಣಿಕ್ಯಗಳು ಮತ್ತು ಪಚ್ಚೆ ಹರಳುಗಳನ್ನು ಹೊದಿಸಲಾಗಿತ್ತು ಎಂದು ಹೇಳಲಾಗಿದೆ.
ಭದ್ರತಾ ಲೋಪ:
ಒಂದು ಕೋಟಿ ಮೌಲ್ಯದ ಕಲಶ ಕಳ್ಳತನ ನಡೆದಿರುವ ಜೊತೆಗೆ ಕೆಂಪುಕೋಟೆಯಲ್ಲಿ ಭದ್ರತಾಲೋಪದ ಮಾತುಗಳು ಕೇಳಿಬಂದಿದ್ದು ಅಷ್ಟು ಮಾತ್ರವಲ್ಲದೆ ಆಗಸ್ಟ್ 2 ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕಾಗಿ ನಡೆಸಲಾದ ಅಣ ಕು ಡ್ರಿಲ್ ಕಾರ್ಯಾಚರಣೆಯಲ್ಲೂ ಭದ್ರತಾ ಸಿಬ್ಬಂದಿಗಳು ಲೋಪ ಎಸಗಿದ್ದು ಇದರ ಪರಿಣಾಮ ಭದ್ರತಾ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿತ್ತು ಇದೀಗ ಮತ್ತೊಂದು ದೊಡ್ಡ ಮ ಟ್ಟದ ಭದ್ರತಾ ಲೋಪ ನಡೆದಿರುವುದು ಕೆಂಪುಕೋಟೆಯ ಭದ್ರ ತೆಯ ಬಗ್ಗೆ ಹಲವು ಅನುಮಾನಗಳು ಹುಟ್ಟುಹಾಕುವಂತಾಗಿದೆ.