ಅಪರಾಧ

ಉಳ್ಳಾಲ: ATM ನಿಂದ ಹಣ ಕಳ್ಳತನಕ್ಕೆ ಯತ್ನ; ಆರೋಪಿಯ ಬಂಧನ!!

ಈ ಸುದ್ದಿಯನ್ನು ಶೇರ್ ಮಾಡಿ

ಉಳ್ಳಾಲ: ಕೋಟೆಕಾರು ಬೀರಿ ಎಟಿಎಂನಲ್ಲಿ ತಡರಾತ್ರಿ ಹಣ ಕದಿಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿಯ ಕಣ್ಣಾವಲು ವ್ಯವಸ್ಥೆಯ ಎಚ್ಚರಿಕೆಯ ಮೇರೆಗೆ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

akshaya college

ಬಂಧಿತ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿಯ ನಿವಾಸಿ ಎಂದು ಬಂಧಿತ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿಯ ನಾಗಪ್ಪ ಕೇರಳಟ್ಟಿ (41) ಗುರುತಿಸಲಾಗಿದೆ.ನಾಗಪ್ಪ (41) ಎಂಬಾತನನ್ನು ಮುಂಜಾನೆ 3 ಗಂಟೆ ಸುಮಾರಿಗೆ ಎಸ್‌ಬಿಐ ಎಟಿಎಂನಲ್ಲಿದ್ದ ಕ್ಯಾಶ್ ಬಾಕ್ಸ್ ಒಡೆಯಲು ಯತ್ನಿಸುತ್ತಿದ್ದಾಗ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಪೊಲೀಸರ ಪ್ರಕಾರ, ನಾಗಪ್ಪ ಬೆಳಗಿನ ಜಾವ 2:30 ರ ಸುಮಾರಿಗೆ ಎಟಿಎಂ ಒಳಗೆ ಪ್ರವೇಶಿಸಿ, ತಾನು ತಂದಿದ್ದ ಉಪಕರಣಗಳನ್ನು ಬಳಸಿ ಕ್ಯಾಶ್ ಬಾಕ್ಸ್ ಅನ್ನು ಹಾನಿಗೊಳಿಸಿದ್ದಾನೆ. ದೆಹಲಿಯಿಂದ ಹಿಡಿದು ವಿವಿಧ ಜಿಲ್ಲೆಗಳ ಎಟಿಎಂಗಳ ಮೇಲೆ ನಿಗಾ ಇಡುವ ದೆಹಲಿಯ ಕಣ್ಣಾವಲು ವ್ಯವಸ್ಥೆಯು ಈ ಕೃತ್ಯದ ಬಗ್ಗೆ ಎಚ್ಚರಿಕೆ ನೀಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts